ಸುಳ್ಯದ ಶೃಂಗಾರ್ ಬ್ಯೂಟಿ ಸೆಂಟರ್ ಮಾಲಕ ಚಿದಾನಂದ ಮೋಂಟಡ್ಕ ನಿಧನ

0

ಸುಳ್ಯದ ಬಾಳೆಮಕ್ಕಿಯಲ್ಲಿರುವ ಶೃಂಗಾರ್ ಬ್ಯೂಟಿ ಸೆಂಟರ್ ಮಾಲಕ ಚಿದಾನಂದ ಮೊಂಟಡ್ಕರವರು ಅಲ್ಪಕಾಲದ ಅಸೌಖ್ಯದಿಂದ ಸೆ. 25 ರಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 64 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಭಾರತಿ ಚಿದಾನಂದ, ಪುತ್ರಿಯರಾದ ಶ್ರೀಮತಿ ಅಂಕಿತ, ಮಯೂರಿ, ಪುತ್ರ ಶ್ರೀರಾಮ, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತಿಮ ದರ್ಶನಕ್ಕೆ
ಬೆಳಿಗ್ಗೆ 10 ಗಂಟೆಯ ತನಕ ಕುರುಂಜಿಭಾಗ್ ನಲ್ಲಿರುವ ಅವರ ಮನೆಯಲ್ಲಿ ವ್ಯವಸ್ಥೆ ಇದ್ದು, ತದ ನಂತರ ಕುಕ್ಕುಂದೂರು ಮೊಂಟಡ್ಕದಲ್ಲಿರುವ ಮನೆಯಲ್ಲಿ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.