ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನಿವಾಸಿ ಶ್ರೀಮತಿ ಸುಶೀಲ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಅವರ ಮಗಳ ಮನೆಯಲ್ಲಿ ಸೆ.24ರಂದು ನಿಧನರಾದರು. ಅವರಿಗೆ ಸುಮಾರು 79 ವರ್ಷ ವಯಸ್ಸಾಗಿತ್ತು.














ಸುಶೀಲರವರು ಕೆಲ ವರ್ಷಗಳಿಂದ ಅಜ್ಜಾವರದ ಬಸವನಪಾದೆಯಲ್ಲಿರುವ ಮಗಳು ಸತ್ಯವತಿಯವರ ಮನೆಯಲ್ಲಿದ್ದರು. ಕೆಲ ತಿಂಗಳ ಹಿಂದೆ ಅಸೌಖ್ಯ ಕಾಣಿಸಿಕೊಂಡಿದ್ದು ಚಿಕಿತ್ಸೆ ಕೊಡಿಸಲಾಯಿತಾದರೂ ಫಲ ಕಾಣದೇ ಸೆ.24ರಂದು ಕೊನೆಯುಸಿರೆಳೆದರು.
ಸುಶೀಲರವರ ಮೃತ ದೇಹವನ್ನು ದುಗಲಡ್ಕ ನೀರಬಿದಿರೆಯಲ್ಲಿರುವ ಅವರ ಮನೆಗೆ ತರಲಾಗಿದ್ದು ಅಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ.
ಮೃತರು ಮಕ್ಕಳಾದ ಲವಕುಶ, ವಸಂತಿ , ಹೇಮಾವತಿ, ವಿಜಯ, ಸತ್ಯವತಿ, ಸೂರ್ಯನಾರಾಯಣ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.







