ಅ.5ರಂದು ನಡೆಯಲಿರುವ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ದ. ಕ. ಜಿಲ್ಲೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದ.ಕ ಜಿಲ್ಲೆ 2 ರ ವತಿಯಿಂದ ಅಕ್ಟೋಬರ್. 5 ರಂದು
ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡಿರುವ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೆ. 24 ರಂದು ಬಿಡುಗಡೆ ಮಾಡಲಾಯಿತು.

ಸಂಜೆ ಚೆನ್ನಕೇಶವ ದೇವಸ್ಥಾನದಲ್ಲಿ ಅರ್ಚಕರಾದ ಹರಿಕೃಷ್ಣ ವಾರಂಬಳಿತ್ತಾಯರವರ ನೇತೃತ್ವದಲ್ಲಿ ಪ್ರಾರ್ಥಿಸಿ ಪೂಜೆಯನ್ನು ನೆರವೇರಿಸಲಾಯಿತು.
ಬಳಿಕ ಆಮಂತ್ರಣ ಪತ್ರಿಕೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎನ್.ಎ ರಾಮಚಂದ್ರ ರವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ,ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಾದ ಭವಾನಿ ಶಂಕರ ಅಡ್ತಲೆ, ಮಲ್ಲೇಶ್ ಬೆಟ್ಟಂಪಾಡಿ, ಭಾಸ್ಕರ ಅಡ್ಕಾರ್, ಪದ್ಮನಾಭ ಜೈನ್ ಬಲ್ನಾಡುಪೇಟೆ, ಮನೋಹರ ಪರಿವಾರಕಾನ, ವಿಜಯ ಕುಮಾರ್ ಉಬರಡ್ಕ, ಸುಬ್ಬಣ್ಣ ಮುಳ್ಯ, ಹರಿಪ್ರಸಾದ್ ಸುಳ್ಯ, ಶ್ರೀಮತಿ ಸವಿತಾಸಂದೇಶ ಸೂಂತೋಡು,ಯೋಜನೆಯ ಮೇಲ್ವಿಚಾರಕ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.