













ರಾಜ್ಯ ಸರಕಾರವು ಹಿಂದೂ ಕಾರ್ಯಕರ್ತರ ಮೇಲೆ ವಿನಾ: ಕಾರಣ ಗೂಂಡಾ ಕಾಯ್ದೆಯನ್ನು ಹೇರಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಸೆ.28 ರಂದು ಸುಳ್ಯದಿಂದ ಬಿ.ಸಿ.ರೋಡ್ ಚಲೋ ಯಾತ್ರೆಯು ನಡೆಯಲಿರುವುದು.
ಬೆಳಗ್ಗೆ ಗಂಟೆ 7.00 ಕ್ಕೆ ಸುಳ್ಯದಿಂದ ಯಾತ್ರೆಯು ಹೊರಡಲಿದ್ದು ಸಹಸ್ರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಖಂಡದ ಪ್ರಮುಖರು ತಿಳಿಸಿದ್ದಾರೆ.







