ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಐ.ಕ್ಯು.ಎ.ಸಿ ನೇತೃತ್ವದಲ್ಲಿ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಹಿಂದಿ ದಿವಸ್ ಕಾರ್ಯಕ್ರಮವನ್ನು ಸೆಪ್ಟಂಬರ್-೧೭ರಂದು ಕಾಲೇಜು ಸಭಾಂಗಣದಲ್ಲಿ ಆಚರಿಸಲಾಯಿತು.















ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಎನ್ ಪಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ ಮಂಗಳೂರು ಇಲ್ಲಿಯ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೋ. ಸುಮಾ ಟಿ ಆರ್ ಭಾಗವಹಿಸಿ, ತಮ್ಮ ಉಪನ್ಯಾಸದಲ್ಲಿ ಹಿಂದಿಯ ಪ್ರಸ್ತುತ ಸ್ಥಿತಿ ಉದ್ಯೋಗದಲ್ಲಿ ಹಿಂದಿಯ ಪಾತ್ರ ಮತ್ತು ಹಿಂದಿಯ ಮಹತ್ವದ ಬಗ್ಗೆ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಎನ್ ಪಿ ಇವರು ವಿದ್ಯಾರ್ಥಗಳಿಗೆ ಹಿಂದಿಯನ್ನು ಕೇವಲ ಒಂದು ಭಾಷೆಯಾಗಿ ಮಾತ್ರವಲ್ಲದೆ ಸಂಸ್ಕಾರವಾಗಿ ಅಳವಡಿಸುವಂತೆ ಕರೆ ನೀಡಿದರು. ಕಾಲೇಜಿನ ಐ.ಕ್ಯು.ಎ.ಸಿ ಸಂಚಾಲಕರಾದ ಡಾ ಪ್ರೀತಿ ಕೆ ರಾವ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಿಂದಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಯಿತು.

ನಮ್ಮ ಕಾಲೇಜಿನಲ್ಲಿ ಹಿಂದಿ ಭಾಷಾ ವಿಷಯ ವ್ಯಾಸಂಗ ಮಾಡಿ ಹಿಂದಿ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಹಿರಿಯ ವಿದ್ಯಾರ್ಥಿಗಳಾದ ಪ್ರಸಾದ್ ಕಾಟೂರು ದೀಪಂ ಎಂ ಎಸ್ ಮುಳ್ಯ, ಕುಮಾರಿ ಶ್ರೀ ಮೇಧ ಕುಂಟಾರು, ಹರ್ಷಿತಾ ಪಿ ಎಸ್ ಪಂಜಿಕಲ್ಲು ಇವರುಗಳನ್ನು ಸನ್ಮಾನಿಸಲಾಯಿತು. ಪ್ರಸ್ತುತ ಸಾಲಿನಲ್ಲಿ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಎಂ ಎ ಮಾಡಲು ದಾಖಲಾತಿ ಪಡೆದಿರುವ ಕು.ಮೈತ್ರಿ ಎನ್, ಕು.ಪವಿತ್ರ ಪಿ.ಆರ್, ನಿತೀಶ್ ಜೆ ಎಲ್, ಶ್ರೀಕರ ಎನ್, ಇವರುಗಳನ್ನು ಅಭಿನಂದಿಸಿ ಶುಭಾಶಯ ಕೋರಲಾಯಿತು.

ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಹಿಂದಿ ವಿಭಾಗದ ಮುಖ್ಯಸ್ಥರಾದ ರಾಮಕೃಷ್ಣ ಕೆ ಎಸ್ ರವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಶ್ರೀಮತಿ ಗೀತಾಕ್ಷಿ ಕೆ ಆರ್ ವಂದಿಸಿದರು. ಹಿಂದಿ ಸಂಘದ ಅಧ್ಯಕ್ಷರಾದ ಪ್ರಿಯದರ್ಶಿನಿ ಕಾರ್ಯದರ್ಶಿ ಚೇತನ್ ಕುಮಾರ್ ಸೇರಿದಂತೆ ಹಿಂದಿ ಸಂಘದ ಎಲ್ಲಾ ವಿದ್ಯಾರ್ಥಿಗಳು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.







