ಅಟ್ಟಿ ಮಡಿಕೆ ಸ್ಪರ್ಧೆಯಲ್ಲಿ ಬಂದ ಬಹುಮಾನವನ್ನು ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಭರಿಸಲು ಕೊಡುಗೆ ನೀಡಿ ಮಾನವೀಯತೆ ಮೆರೆದ ಯುವಕ ಮಂಡಲ
ನೂತನ ಆಂಬ್ಯುಲೆನ್ಸ್ ಖರೀದಿಸಲು ಸಹಾಯಧನಕ್ಕೆ ಚಾಲನೆ
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ವತಿಯಿಂದ 6ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕ ಮೊಸರುಕುಡಿಕೆ ಉತ್ಸವವು ಸೆ.20ರಂದು ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ಕಾರ್ಯಕ್ರಮ ಉದ್ಘಾಟಿಸಿದರು. ಯುವಕ ಮಂಡಲದ ಅಧ್ಯಕ್ಷ ಮಹೇಶ ಹೈದಂಗೂರು ಅಧ್ಯಕ್ಷತೆ ವಹಿಸಿದ್ದರು.















ಮುಖ್ಯ ಅತಿಥಿಗಳಾಗಿ ಶ್ರೀ ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಕಾರ್ಯದರ್ಶಿ ಸತೀಶ್ ರಾವ್ ದಾಸರಬೈಲು, ವ್ಯವಸ್ಥಾಪನ ಸಮಿತಿ ಸದಸ್ಯ ಮೋಹಿತ್ ಹರ್ಲಡ್ಕ, ಗಜಾನನ ಯುವತಿ ಮಂಡಲ ಬೊಮ್ಮಾರು ಇದರ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಬಾಣೂರು, ಮರ್ಕಂಜ ಪ್ರೌಢಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ರಾಜೇಶ್ ರೆಂಜಾಳ ಸ್ವಾಗತಿಸಿ, ಹರ್ಷಿತ್ ಮಿತ್ತಡ್ಕ ವಂದಿಸಿದರು. ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ದೆಗಳು ನಡೆದವು.

ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಮೋನಪ್ಪ ಪೂಜಾರಿ ಹೈದಂಗೂರು ಹಾಗೂ ನವೀನ್ ದೊಡ್ಡಿಹಿತ್ಲುರವರು ಚಾಲನೆ ನೀಡಿದರು.
ಕಾರ್ಯಕ್ರಮದ ಮಧ್ಯದಲ್ಲಿ ಆಗಮಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು।ಭಾಗೀರಥಿ ಮುರುಳ್ಯರವರು ಮಾತನಾಡಿ ಯುವಕ ಮಂಡಲದ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಯುವಕ ಮಂಡಲದ ವತಿಯಿಂದ ಆಂಬ್ಯುಲೆನ್ಸ್ ಖರೀದಿಸುವ ಯೋಜನೆಗೆ ಸಹಕಾರ ನೀಡುವುದಾಗಿ ಹೇಳಿದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕಮಂಡಲದ ಅಧ್ಯಕ್ಷ ಮಹೇಶ್ ಹೈದಂಗೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಸ್ಥಾಪನೆಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಕಾಯರ, ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ಧಮಠ ಮರ್ಕಂಜ ದ ಧರ್ಮ ದರ್ಶಿ ಗಳಾದ ಔಘಡ್ ಫೀರ್ ರಾಜೇಶ್ ನಾಥ್ ಜೀ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ಪ್ರಗತಿಪರ ಕೃಷಿಕ ಪ್ರಭಾಕರ ರೈ ಪೆರಾಜೆ, ಅನ್ನಪೂರ್ಣ ಸಮಿತಿ ಶ್ರೀ ಕ್ಷೇತ್ರ ರೆಂಜಾಳದ ಸಂಚಾಲಕ ಚಿನ್ನಪ್ಪ ಗೌಡ ಬೇರಿಕೆ, ಮರ್ಕಂಜ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ
ದಯಾನಂದ ಪುರ, ಸಂಪಾಜೆ ಶಾಖೆಯ ಉಪವಲಯಾರಣ್ಯಾಧಿಕಾರಿ
ವೆಂಕಟೇಶ್, ಉದ್ಯಮಿ
ಮಹೇಶ್ ಮೇರ್ಕಜೆ ಉಪಸ್ಥಿತರಿದ್ದರು. ಲೋಹಿತ್ ರೆಂಜಾಳ ಸ್ವಗತಿಸಿ, ಜಯಪ್ರಕಾಶ ಬೇರಿಕೆ ವಾರ್ಷಿಕ ವರದಿ ವಾಚಿಸಿದರು. ಹರ್ಷಿತ್ ಮಿತ್ತಡ್ಕ ವಂದಿಸಿದರು. ರಾಜೇಶ್ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಯುವಕ ಮಂಡಲದ ವತಿಯಿಂದ ನೂತನ ಆಂಬ್ಯುಲೆನ್ಸ್ ಖರೀದಿಗೆ ಚಿಂತನೆ – ಸಹಾಯಧನಕ್ಕೆ ಚಾಲನೆ
ಮರ್ಕಂಜ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಏನೇ ಹಠತ್ ಆರೋಗ್ಯ ಸಮಸ್ಯೆ ಎದುರಾದರೆ ರೋಗಿಗಳನ್ನು ಅಥವಾ ಅವಘಡ ಸಂಭವಿಸಿದರೆ ಅವಘಡಕ್ಕೋಳಗದವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ಸರಿಯಾದ ವ್ಯವಸ್ಥೆಗಳಿಲ್ಲದ ಕಾರಣ ಈ ಭಾಗಕ್ಕೆ ಆಂಬುಲೆನ್ಸ್ ವಾಹನದ ಅವಶ್ಯಕತೆಯನ್ನು ಮನಗಂಡು ಆಂಬುಲೆನ್ಸ್ ಖರೀದಿಸಲು ಚಿಂತನೆ ನಡೆಸಿತ್ತು. ಇದಕ್ಕಾಗಿ ಧನಸಹಾಯ ಸಂಗ್ರಹಿಸಲು ಚಾಲನೆ ನೀಡಲಾಯಿತು.
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಾಸ್ತಾವು ಯುವಕ ಮಂಡಲವು ಕಳೆದ ಐದಾರು ವರ್ಷಗಳಿಂದ ಅನೇಕ ಸಮಾಜಮುಖಿ, ಜನಪರ ಕೆಲಸಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು ಇವರ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ನೂತನ ಆಂಬ್ಯುಲೆನ್ಸ್ ಖರೀದಿಸಿ 2027ರ ಜನವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವ ಬಗ್ಗೆಯೂ ಸಭೆಯಲ್ಲಿ ಘೋಷಿಸಲಾಯಿತು.
ಧನಸಹಾಯಕ್ಕಾಗಿ ಸುಳ್ಯ ಶಾಸಕರಿಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಯೋಜನಾಧಿಕಾರಿಗಳಿಗೆ ಯುವಕಮಂಡಲದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಅಟ್ಟಿ ಮಡಿಕೆ ಸ್ಪರ್ಧೆಯಲ್ಲಿ ಬಂದ ಬಹುಮಾನ ಬಡ ವಿದ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಭರಿಸಲು ಕೊಡುಗೆ
ಶಾಸ್ತಾವು ಯುವಕ ಮಂಡಲವು ಈ ಬಾರಿ ಅಟ್ಟಿಮಡಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಸುಳ್ಯ ಪ್ರಥಮ, ಆಲೆಟ್ಟಿ ಪ್ರಥಮ, ಬೆಳ್ಳಾರೆ ದ್ವಿತೀಯ ಹಾಗೂ ಸುಬ್ರಮಣ್ಯದಲ್ಲಿ ತೃತೀಯ ಸ್ಥಾನ ಪಡೆದು ಫಲಕ ಮತ್ತು ಹಣವನ್ನು ಬಹುಮಾನವಾಗಿ ಪಡೆದುಕೊಂಡಿತ್ತು.
ಅದರಲ್ಲಿ ದೊರೆತ ಒಟ್ಟು ರೂ.15 ಸಾವಿರ ಮೊತ್ತವನ್ನು ತೀರಾ ಬಡತನದಲ್ಲಿರುವ ಸುಳ್ಯದ ಅಂಬಟೆಡ್ಕ ನಿವಾಸಿ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ರಿಯಾ ಸಂದೀಪ್ ಯಾದವ್ ರವರಿಗೆ ಅಷ್ಟಮಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಸ್ತಾಂತರಿಸಿ ಮಾನವೀಯತೆಗೆ ಸಾಕ್ಷಿಯಾಯಿತು.







