ಗುತ್ತಿಗಾರು ರಬ್ಬರ್ ಸೊಸೈಟಿ ಮಹಾಸಭೆ

0

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಮಹಾಸಭೆ ಸೆ. 24 ರಂದು ಸಂಘದ ಕಛೇರಿಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲಕ್ಷ್ಮೀ ಕೆ ವರದಿ ವಾಚನ ಮಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ನಾಗೇಶ್ ಪಾರೆಪ್ಪಾಡಿ, ನಿರ್ದೇಶಕರಾದ ಹೊನ್ಬಪ್ಪ ಗೌಡ ಹೆಚ್, ಲೊಕೇಶ್ವರ ಡಿ.ಆರ್, ಹರೀಶ್ ಚಿಲ್ತಡ್ಕ, ಕರುಣಾಕರ ಹೆಚ್, ಶ್ರೀಮತಿ ಶಶಿಕಲಾ ಡಿ.ಪಿ, ಶ್ರೀಮತಿ ಪ್ರಮಿತ ಬಿ.ಕೆ, ದುರ್ಗಾದಾಸ್ ಮೆತ್ತಡ್ಜ, ವೆಂಕಟ್ರಮಣ ಹೆಚ್, ವಿನಯಕುಮಾರ್ ಎಂ.ಟಿ, ಸನತ್ ಮುಳುಗಾಡು, ಪೇರಪ್ಪ ಹೆಚ್, ಶೂರಪ್ಪ ಡಿ ಉಪಸ್ಥಿತರಿದ್ದರು.

ಸಭೆಯಲ್ಲಿ ರಬ್ಬರ್ ಹಾಲು ಖರೀದಿ , ಹೊಸ ಶಾಖೆ ತೆರೆಯುವ , ಹೊಸ ಸದಸ್ಯರನ್ನು ಸೇರಿಸುವ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.