













ಮುರುಳ್ಯ ಗ್ರಾ.ಪಂ. ೨೦೨೬-೨೭ನೇ ಸಾಲಿನ ಗ್ರಾಮ ಸಭೆಯು ನೋಡೆಲ್ ಅಧಿಕಾರಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಎಸ್. ರವರ ಸಭಾಧ್ಯಕ್ಷತೆಯಲ್ಲಿ ಸೆ.೨೪ ರಂದು ಮುರುಳ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮೆಸ್ಕಾಂ ಅಧಿಕಾರಿ ಹರೀಶ್ ನಾಯ್ಕ್ ಮೆಸ್ಕಾಂ ಇಲಾಖೆಯ ಮಾಹಿತಿ ನೀಡಿದಾಗ ಪೂದೆ ದೇವಸ್ಥಾನ ಶೀಘ್ರದಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದೆ ಆ ಭಾಗದಲ್ಲಿ ವಿದ್ಯುತ್ ಸಮಸ್ಯೆ ಇದೆ, ಅಲ್ಲಿಗೆ ಹೊಸ ಟಿ ಸಿ ಅಗತ್ಯವಿದೆ ಎಂದು ಅನೂಪ್ ಬಿಳಿಮಲೆ ಹೇಳಿದರು. ತೋಟದ ಗದ್ದೆಯ ಬಳಿಯಲ್ಲಿ ಐದಾರು ಕಂಬಗಳು ಹಾದು ಹೋಗುತ್ತದೆ ಮತ್ತು ೩೫ ಹಳೆಯ ತಂತಿಗಳನ್ನು ಬದಲಾಯಿಸಬೇಕಿದೆ. ಪ್ರತಿ ಗ್ರಾಮ ಸಭೆಯಲ್ಲಿ ನಾವು ಹೇಳುತ್ತಾ ಬಂದಿದ್ದೇವೆ. ಏನು ಕ್ರಮ ಕೈಗೊಂಡಿದ್ದಾರೆಂದು ತಿಳಿದು ಬಂದಿಲ್ಲ ಎಂದು ಅಶೋಕ್ ಚೆನ್ನಯ್ಯಮಜಲು ಹೇಳಿದರು.

ಅಲೆಕ್ಕಾಡಿ- ಕಾಪುತಡ್ಕದಿಂದ ದೂರ ಆಗಿ ಲೋಡ್ ಆದುದರಿಂದ ಸಮಸ್ಯೆಯಾಗಿದೆ ಎಂದು ಹೇಳಿದರು. ಅಲೇಕಿಯಯಲ್ಲಿ ತಂತಿ ತುಂಡಾಗಿ ಬಿದ್ದು ತಿಳಿಸಿದರೂ ಸಂಬಂಧ ಪಟ್ಟವರು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ ಯಾರಲ್ಲಿ ನಾವು ಹೇಳಬೇಕು? ಏನಾದರೂ ಹೆಚ್ಚು ಕಮ್ಮಿಯಾದರೆ ಏನು ಮಾಡುವುದು? ತಕ್ಷಣ ದುರಸ್ತಿ ಮಾಡಲು ಯಾರಿಗೆ ತಿಳಿಸ ಬೇಕು ಎಂದು ಪಂಚಾಯತ್ ಮಾಜಿ ಸದಸ್ಯ ಮೋನಪ್ಪ ಗೌಡ ಹೇಳಿದರು. ಟಿಸಿಯನ್ನು ಬಜೆಟ್ ನೋಡಿಕೊಂಡು ಅಳವಡಿಸುವ, ಉಳಿದ ವಿಷಯಗಳನ್ನು ಸರಿ ಮಾಡುವ ಎಂದು ಮೆಸ್ಕಾಂ ಅಧಿಕಾರಿ ಹೇಳಿದರು.
ದೇವಸ್ಥಾನ, ಮಂದಿರಗಳಿಗೆ ಗೃಹಜ್ಯೋತಿ ಸೌಲಭ್ಯ ನೀಡಬೇಕು. ಇಲ್ಲಿ ಯಾವುದೇ ಆದಾಯ ಇರುವುದಿಲ್ಲ ಎಂದು ವಸಂತ ನಡುಬೈಲು ಹೇಳಿದರು. ಸೋಲಾರ್ ದೀಪ ಅಳವಡಿಸುವ ಬಗ್ಗೆಯೂ ಪ್ರಸ್ತಾಪವಾಗಿ ಚರ್ಚೆ ನಡೆಯಿತು. ಅಲೆಕ್ಕಾಡಿಯಲ್ಲಿ ಸಾರ್ವಜನಿಕ ಸ್ಥಳ ಬಸ್ ನಿಲ್ದಾಣ, ರಿಕ್ಷಾ ಪಾರ್ಕ್ ಬಳಿ ತುಂಬಾ ಎತರದ ಮರಗಳು ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಇದೆ. ಗಾಳಿ ಮಳೆಗೆ ಹೆದರಿ ರಿಕ್ಷಾದವರು, ಪ್ರಯಾಣಿಕರು ಓಡಿದ್ದೂ ಉಂಟು ಕೂಡಲೇ ಮರಗಳನ್ನು ತೆರವು ಗೊಳಿಸ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ನಾವು ಬರೆದಿದ್ದೀವೆ ಆರ್ಡರ್ ಬಂದ ತಕ್ಷಣ ತೆರವುಗೊಳಿಸುತ್ತೇವೆ ಎಂದು ಅರಣ್ಯಾಧಿಕಾರಿ ಹೇಳಿದರು.

ಎಮ್ ಜಿ ನರೇಗಾ ಯೋಜನೆಯ ಬಗ್ಗೆ ಮಾಹಿತಿ ನೀಡಿದಾಗ, ಹಳೆಯ ಕೆರೆಯನ್ನು ಮುಚ್ಚುವುದು, ಅಪಾಯವನ್ನು ಆಹ್ವಾನಿಸುವ ಕೆರೆಗಳನ್ನು ಮುಚ್ಚಲು ಅನುದಾನವಿದೆಯೇ? ಎಂದು ಮೇದಪ್ಪ ಮಾನ್ಯಡ್ಕ, ಅನೂಪ್ ಬಿಳಿಮಲೆ ಕೇಳಿದರು. ಮುಚ್ಚುವ ಪ್ರಶ್ನೆ ಬರುವುದಿಲ್ಲ ಇದ್ದರೆ ಮೇಲಿನ ಅಧಿಕಾರಿಗಳಲ್ಲಿ ಕೇಳಿ ಹೇಳುತೇವೆ ಮಾಹಿತಿ ನೀಡಿದರು.
ಅರೋಗ್ಯ ಇಲಾಖೆಯ ಬಗ್ಗೆ ಮಾಹಿತಿ ನೀಡಿದಾಗ ಮಾನ್ಯಡ್ಕ ವ್ಯಾಪ್ತಿಯಲ್ಲಿ ವಯಸ್ಸಾದವರು ಇದ್ದಾರೆ. ಕೆಲವು ಕಡೆ ಸರಿಯಾದ ರಸ್ತೆ, ದಾರಿ ಇರುವುದಿಲ್ಲ. ಅಲ್ಲಿ ಬಿಪಿ ಚೆಕ್ಅಪ್ ಗೆ ಹೋಗಲು ಆಗುವುದಿಲ್ಲ ಅಲ್ಲಿ ಕ್ಯಾಂಪ್ ಇಟ್ಟುಕೊಂಡರೆ ಹೇಗೆ? ಎಂದು ಮೆದಪ್ಪ ಗೌಡರು ಅಭಿಪ್ರಾಯಪಟ್ಟರು. ಆಶಾ ಕಾರ್ಯಕರ್ತೆ ಉಷಾರವರು ನಾವು ಮನೆ ಮನೆಗೆ ಹೋಗಿ ಆರೋಗ್ಯ ವಿಚಾರಿಸುತ್ತೇವೆ ಎಂದರು.
ನಮಗೆ ಹಿರಿಯರಿಂದ ಬಂದ ವರ್ಗ ಮತ್ತು ಕುಮ್ಕಿ ಜಾಗ ಇದ್ದು, ಅದರಲ್ಲಿ ಮುಸ್ಲಿಮರು ದಪನ ಮಾಡಲು ಜಾಗಕ್ಕಾಗಿ ಧಮ್ಕಿ ಹೊಡೆಯುತ್ತಾರೆ. ನಾನು ಒಬ್ಬ ಮಹಿಳೆ ಮಾತ್ರ ಇರುವುದು, ನನ್ನ ಗಂಡ ದೂರದ ಊರಿನಲ್ಲಿ ಕೆಲಸದಲ್ಲಿದ್ದಾರೆ. ದಾರಿಗೆ ಮಣ್ಣು ಹಾಕಿ ತೊಂದರೆ ಕೊಡ್ತಾರೆ ಎಂದು ಜಾಗದ ಮಾಲಕಿ ಶ್ರೀಮತಿ ಚೇತನಾ ಕಿಶನ್ ಹೇಳಿದರು. ಹಾಗಿದ್ದರೆ ನೀವು ಪೊಲೀಸ್ ದೂರುಕೋಡಿ ಎಂದು ನೋಡೆಲ್ ಅಧಿಕಾರಿ ಹೇಳಿದರು.
ಎಲ್ಲಾ ಇಲಾಖೆಯವರು ವೇದಿಕೆಯಲ್ಲಿದ್ದು ಮಾಹಿತಿ ನೀಡಿದರು.
ಪಂಚಾಯತ್ ಸಿಬ್ಬಂದಿ ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಬ್ಬಂದಿಗಳಾದ ಜಯಮ್ಮ, ರಂಜಿನಿ ಹಾಗೂ ಶೈಲಜಾರವರು ಪ್ರಾರ್ಥಿಸಿದರು ಯೋಗೀಶ್ ಪೂದೆ ಸಹಕರಿಸಿದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ








