














ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.೨೫ ರಂದು ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಎಂ. ಬಿ. ಸೀತಾರಾಮ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎನ್. ಜಿ. ಲೋಕನಾಥ ರೈ ಪಟ್ಟೆಯವರು ದೀಪ ಪ್ರಜ್ವಲನೆ ಮಾಡಿ ಶುಭಹಾರೈಸಿದರು. ಸಂಘದ ಪ್ರಭಾರ ಕಾರ್ಯದರ್ಶಿ ಭುವನ್ ಕುಮಾರ್ ವರದಿ ವಾಚಿಸಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚರ್ಚಿಸಿದರು. ಸದಸ್ಯರ ಮಕ್ಕಳು ವ್ಯಾಸಂಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸನ್ಮಾನ ಕಾರ್ಯ ಕ್ರಮ
ಸದಸ್ಯರಾದ ಕೃಷಿ ಸಮಗ್ರ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿಜಾವುಗುತ್ತು ಪಾರ್ಲ ಬಾಲಕೃಷ್ಣ ರೈಯವರ ಪುತ್ರಿ ಡಾಕ್ಟರೇಟ್ ಪದವಿ ಪಡೆದ ಕು. ಅಖಿಲ ಬಿ. ರೈ ಮತ್ತು ಪೂದೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪದ್ಮನಾಭ ಪೂದೆಯವರ ಪುತ್ರಿ ಭಾರ ಎತ್ತುವಿಕೆಯಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿ ಹೊರ ಹೊಮ್ಮಿದ ಕು. ಹರ್ಷಿತಾ ಪಿ. ಪೂದೆ ಯವರನ್ನು ಸ್ಮರಣಿಕೆ ನೀಡಿ ಸನ್ಮಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಡಾ. ರವಿರಾಜ್ ಉಡುಪ ಉಪ ವ್ಯವಸ್ಥಾಪಕ ಡಾ ಸತೀಶ್ ರಾವ್, ವಿಸ್ತರಣಾಧಿಕಾರಿ ಆದಿತ್ಯ ಚಿದ್ಗಲ್, ಪಶು ವೈದ್ಯಾಧಿಕಾರಿ ಡಾ ಸಚಿನ್ ಕುಮಾರ್, ಸಂಘದ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಪಿ ಆರ್, ನಿರ್ದೇಶಕರಾದ ಅಶೋಕ್ ಕುಮಾರ್ ರೈ, ಹರೀಶ್ ರೈ ಸುಂದರ ಗೌಡ, ಜಗನಾಥ ರೈ ಕೆ, ಶ್ರೀಮತಿ ಗೀತಾ, ಶ್ರೀಮತಿ ಭವ್ಯ, ಶ್ರೀಮತಿ ಸಾವಿತ್ರಿ, ಶ್ರೀಮತಿ ಸುಂದರಿ, ಎನ್ ರಾಮಚಂದ್ರ ಪೂಜಾರಿ ಉಪಸ್ಥಿತರಿದ್ದರು.
ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್ ಸ್ವಾಗತಿಸಿದರು. ಸದಸ್ಯೆ ಶ್ರೀಮತಿ ಗೀತಾ ಕಳತಜೆ ವಂದಿಸಿದರು. ಎಣ್ಮೂರು ಪ್ರದೀಪ್ ರೈ ಕಾರ್ಯಕ್ರಮ ನಿರೂಪಣೆ ಮಾಡಿದರು.
ವರದಿ: ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ








