ಗ್ರಾಮಸ್ಥರಿಂದ ಅಹವಾಲು – ಹಕ್ಕೊತ್ತಾಯ ಮಂಡನೆ
ಕೃಷಿಕರಿಗೆ ತೊಂದರೆಯಾಗಬಾರದು – ಆದರೆ ಕಾರ್ಯಮಿತಿಯಲ್ಲಿ ಕಾರ್ಯ ನಿರ್ವಹಣೆ – ತಹಶೀಲ್ದಾರ್, ಅರಣ್ಯಾಧಿಕಾರಿ ಭರವಸೆ

ತಾಲೂಕು ಆಡಳಿತ, ಕನಕಮಜಲು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕನಕಮಜಲು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಕೃಷಿಕರ ಬೆಳೆ ಹಾಗೂ ಗ್ರಾಮಸ್ಥರ ಜೀವ ಮತ್ತು ಆಸ್ತಿಗೆ ರಕ್ಷಣೆ ಒದಗಿಸಲು ತುರ್ತು ಜನ ಸಂಪರ್ಕ ಸಭೆಯು ಸೆ.25ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.















ತಹಶೀಲ್ದಾರ್ ಮಂಜುಳಾ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ರೇಂಜರ್ ಕಿರಣ್ ,
ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ವಿಜೇತ್, ಸುಳ್ಯ ಪೋಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ತಾರನಾಥ ಕೇರ್ಪಳ, ಪಿಡಿಒ ಬಾಬು, ಗ್ರಾಮ ಆಡಳಿತಾಧಿಕಾರಿ ಶಾಹಿನ, ಪಿಡಬ್ಲ್ಯೂಡಿ ಇಂಜಿನಿಯರ್ ಪರಮೇಶ್ವರ, ಸಮಾಜಕಲ್ಯಾಣ ಅಧಿಕಾರಿ ಕೃಷ್ಣ,
ಹೋರಾಟ ಸಮಿತಿ ಅಧ್ಯಕ್ಷ ಹರೀಶ್ ಮೂರ್ಜೆ, ಕಾರ್ಯದರ್ಶಿ ಗಣೇಶ್ ಕಜೆಗದ್ದೆ ವೇದಿಕೆಯಲ್ಲಿದ್ದರು.

ಗ್ರಾ.ಪಂ. ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ ಪ್ರಾಸ್ತಾವಿಕ ಮಾತನಾಡಿ, ಕಾಡಾನೆ ಧಾಳಿಯಿಂದ ಕೃಷಿ ನಾಶ, ಜೀವ ಭಯ ಇತ್ಯಾದಿ ಕುರಿತು ಮಾತನಾಡಿದರು.
ಬಳಿಕ ಆನಂದ ಮಾಸ್ತರ್ ಅಕ್ಕಿಮಲೆ, ಮನೋಜ್ ನರಿಯೂರು, ಹೇಮಲತಾ ಕಜೆಗದ್ದೆ, ವೆಂಕಪ್ಪ ನಾಯ್ಕ ದೇರ್ಕಜೆ ಯವರು ಕೃಷಿ ತೋಟಕ್ಕೆ ಆನೆ ಧಾಳಿಯ ಕುರಿತು ಚಿತ್ರಣ ಸಭೆಯ ಮುಂದಿಟ್ಟರು.
ವಕೀಲರಾದ ಚಂದ್ರಶೇಖರ ನರಿಯೂರು ಹಕ್ಕೊತ್ತಾಯ ಮಂಡಿಸಿ, ಪ್ರತಿಯನ್ನು ಹಸ್ತಾಂತರ ಮಾಡಿದರು.
ಗ್ರಾಮಸ್ಥರು ಅಹವಾಲು ಮಂಡಿಸಿದ ಬಳಿಕ ರೇಂಜರ್ ಕಿರಣ್ ರವರು ಕೈಗೊಂಡ ಕ್ರಮಗಳ ಹಾಗೂ ಮುಂದೆ ಮಾಡಲುದ್ದೇಶಿಸಿರುವ ಯೋಜನೆಯ ಕುರಿತು ಮಾತನಾಡಿದರು.
ಈ ವೇಳೆ ಗೋಪಾಲಕೃಷ್ಣ ಕುತ್ಯಾಳ, ವಿಜಯಕುಮಾರ್ ನರಿಯೂರು, ಅಜಿತ್ ಕಾರಿಂಜ, ಇಬ್ರಾಹಿಂ ಕಾಸಿಂ ಕನಕಮಜಲು, ಜಯಪ್ರಸಾದ್ ಕಾರಿಂಜ, ಈಶ್ವರ ಕೊರಂಬಡ್ಕ, ನಾರಾಯಣ ಬೊಮ್ಮೆಟ್ಟಿ ಮೊದಲಾದವರು ಸಮಸ್ಯೆ ಮುಂದಿಟ್ಟು ಉತ್ತರ ಪಡೆದರು.







