ಅ.9 -11: ಸುಳ್ಯದಲ್ಲಿ ಪ್ರಥಮ ಬಾರಿಗೆ ‘ಸಂಕಲ್ಪ’ ಮಕ್ಕಳ ಹಬ್ಬ-2026

0

ಸುಮಾರು 10 ಸಾವಿರಕ್ಕೂ ಮಿಕ್ಕಿ ಮಕ್ಕಳು ಸೇರುವ ಸಾಧ್ಯತೆ-ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಂಘಟಕರು

ಸುಳ್ಯರಂಗಮಯೂರಿ ಕಲಾ ಶಾಲೆ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಸಮೂಹ ಸಂಸ್ಥೆೆಗಳ ಆಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆೆಗಳ ಸಹಯೋಗದಲ್ಲಿ ‘ವಿಕಸಿತ ಭಾರತದ ಕಡೆ ಮಕ್ಕಳ ನಡೆ’ ಎಂಬ ಧ್ಯೇಯದೊಂದಿಗೆ ಸುಳ್ಯದಲ್ಲಿ ಪ್ರಥಮ ಬಾರಿಗೆ ಸಂಕಲ್ಪ ಮಕ್ಕಳ ಹಬ್ಬ – 2026 ಅ.9 ರಿಂದ 11ರವರೆಗೆ ಮೂರು ದಿನಗಳ ಕಾಲ ಸುಳ್ಯದ ಅಮರಶ್ರೀಭಾಗ್ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದ್ದು , ಈ ಕುರಿತು ಸೆ‌.25 ರಂದು ಸುಳ್ಯದ ಪ್ರೆಸ್ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಸುಳ್ಯ ತಾಲೂಕು ಮತ್ತು ತಾಲೂಕಿಗೆಹೊಂದಿಕೊಂಡಿರುವ ಗಡಿ ಗ್ರಾಮಗಳ ಎಲ್ಲಾ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿಸೇರಿಸಿಕೊಂಡು ಮಕ್ಕಳ ಹಬ್ಬದ ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆೆ ಮುಕ್ತ ಅವಕಾಶ ಹಾಗೂ
ಮಕ್ಕಳ ಸರ್ವತೊಮುಖ ಬೆಳವಣಿಗೆ ಮತ್ತು ವರ್ತಮಾನಕ್ಕೆೆ ಅನುಗುಣವಾಗಿ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಗುಣ ಮಟ್ಟದ ವಿಚಾರ ಸಂಕೀರಣಗಳು, ಮಾಹಿತಿ ಮಾರ್ಗದರ್ಶನ ಮತ್ತು ಸಾಧಕರಿಗೆ ಸನ್ಮಾನವು ನಡೆಯಲಿರುವುದು. ವಿದ್ಯಾಾರ್ಥಿಗಳಿಗೆ ಸಾಂಸ್ಕೃತಿಕ – ಸಾಹಿತ್ಯ ಸ್ಪರ್ಧೆಗಳು, ವೇದಿಕೆ ಪ್ರದರ್ಶನಗಳು, ವಿಚಾರ ಗೋಷ್ಠಿಗಳು ನಡೆಯಲಿದೆ. ಮನೆಗೊಂದು ಗಿಡ ಪರಿಸರ ಜಾಗೃತಿ, ಮಕ್ಕಳ ಆರೋಗ್ಯಕರ ಆಹಾರ ಮೇಳ, ಪುಸ್ತಕ ಮೇಳ, ಹೂ ಹಣ್ಣಿನ ಗಿಡಗಳ ಮಾರಾಟ ಮಳಿಗೆ, ಆರೋಗ್ಯ ತಪಾಸಣಾ ಶಿಬಿರ, ಮಕ್ಕಳ ಆಧಾರ್ ತಿದ್ದುಪಡಿ ಮತ್ತು ನೋಂದಣಿ, ಉಳಿತಾಯ ಜಾಗೃತಿಗಾಗಿ ಬ್ಯಾಂಕಿಂಗ್ ಸೇವಾ ಮಾಹಿತಿ, ಮಾವು, ಹಲಸು, ಅನನಾಸು ಹಣ್ಣಿನ ಹೋಳಿಗೆ ಸ್ಥಳದಲ್ಲೇ ತಯಾರಿ, ಪೋಷಕರಿಗಾಗಿ ವಿನೂತನ ಮಾಹಿತಿ ಕಾರ್ಯಗಾರ ಹಾಗೂ ಪ್ರತಿದಿನ ಸಂಜೆ ವಿಶೇಷವಾಗಿ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದೆ. ಮೂರು ದಿನಗಳು ಸಂಜೆ ಸ್ಥಳೀಯ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಪ್ರಥಮವಾಗಿ ಸುಳ್ಯದಲ್ಲಿ ರೋಬೋಟ್ ಶೋ ಹಾಗೂ ತಾರಾಲಯ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಆಧುನಿಕ ತಾರಾಲಯ ಪ್ರದರ್ಶ ನಗಳು, ಕೃತಕ ಬುದ್ದಿಮತ್ತೆೆಯ ಯಾಂತ್ರಿಕ ಮಾನವ ಮತ್ತು ಶ್ವಾನ ಚಟುವಟಿಕೆಗಳು, ವರ್ಚುವಲ್ ರಿಯಾಲಿಟಿ ಶೋ ಜತೆಗೆ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಎಲ್‌.ಕೆ.ಜಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಜತೆಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಅಂದಾಜು 10 ರಿಂದ 12 ಸಾವಿರ ಮಂದಿ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ರಂಗ ಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಮೂರು ದಿನಗಳ ಕಾಲ ನಡೆಯಲಿರುವ ಮಕ್ಕಳ ಹಬ್ಬದಲ್ಲಿ ಸುಮಾರು 50 ಕ್ಕೂ ಹೆಚ್ಚು ಸ್ಟಾಲ್ ಗಳು ಬರಲಿದೆ. ಸಾವಯವ ಆಹಾರ ಖಾದ್ಯಗಳ ಸ್ಟಾಲ್ ಗಳು ಮತ್ತು ಮಾಹಿತಿ ಕೇಂದ್ರಗಳು ಇರಲಿದೆ ಎಂದು ಸಂಚಾಲಕ ರಂಜಿತ್ ಅಡ್ತಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ವೀರಪ್ಪ ಗೌಡ ಕಣ್ಕಲ್, ಹರೀಶ್ ಬಂಟ್ವಾಳ್, ಯಶ್ವಿತ್ ಕಾಳಮ್ಮನೆ, ನವರಾಜ್ ಕಿರ್ಲಾಯ, ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.