













ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸುಳ್ಯದ ಹಿರಿಯ ವರ್ತಕರಿಗೆಸನ್ಮಾನ ಕಾರ್ಯಕ್ರಮ ಸೆ.29 ಮಂಗಳವಾರದಂದು ಮಧ್ಯಾಹ್ನ 3-30ಕ್ಕೆ “ವರ್ತಕ ಸಮುದಾಯ ಭವನ” ಅಂಬಟೆಡ್ಕ, ಸುಳ್ಯದಲ್ಲಿ ನಡೆಯಲಿದೆ.
ಸುಳ್ಯದಲ್ಲಿ ವಾಣಿಜ್ಯ ವ್ಯಾಪಾರೋದ್ಯಮ & ಕೈಗಾರಿಕೋದ್ಯಮದಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯರನ್ನು ಹಾಗೂ ಕಿರಿಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ತಿಳಿಸಿದ್ದಾರೆ .
ನಿವೃತ್ತ ಬಿಡಿಓ ಮೀನಾಕ್ಷಿ ಗೌಡ,ನಿವೃತ್ತ ಪ್ರಾಂಶುಪಾಲರು ಲಿಂಗಪ್ಪ ಗೌಡ,ಡಾ.ಕೃಷ್ಣ ಭಟ್ ಜಾಲ್ಸೂರು,ಗಣೇಶ್ ಮೆಡಿಕಲ್ಸ್ ನ ಗಿರಿಧರ್ ಹೆಗ್ಡೆ,ಅಬೂಭಕ್ಕರ್ ಕಟ್ಟೆಕ್ಕಾರ್,ರಾಘವ ಕಲ್ಯಾಣ್ ಟೆಕ್ಸ್ ಟೈಲ್ಸ್,ಅ್ಯಂಬುಲೆನ್ಸ್ ಚಾಲಕ ಹನೀಫ್ ,ರಾಜು ರವರು ಮಹಾಸಭೆ ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಸನ್ಮಾನ ಸ್ವೀಕರಿಸಲಿದ್ದಾರೆ.






