













ಸುಳ್ಯದ ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ಕೆ.ಎಸ್ ರವರು ಸೆ.30 ರಂದು ಸುಮರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಲಿದ್ದಾರೆ.
ಇವರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಗೊದ್ದನ ಕೊಪ್ಪಲು ಗ್ರಾಮದ ಶ್ರೀ ಸಣ್ಣಸ್ವಾಮಿ ಮತ್ತು ಶ್ರೀಮತಿ ಅಕ್ಕಯಮ್ಮ ದಂಪತಿಗಳ ಹಿರಿಯ ಪುತ್ರನಾದ ಇವರು ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿ, 1987 ರಿಂದ 1988 ರ ತನಕ ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿ ಕರ್ತವ್ಯ ನಿರ್ವಹಿಸಿ, 1989 ರಿಂದ 1996 ರವರೆಗೆ ಭಾರೀ ಸರಕು ಸಾಗಾಟದ ಲಾರಿಯಲ್ಲಿ ಸೇವೆ ಸಲ್ಲಿಸಿ, ನಂತರ 23.4.1998 ರಲ್ಲಿ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗ ಪುತ್ತೂರು ಘಟಕದಲ್ಲಿ ಚಾಲಕರಾಗಿ ಸೇರ್ಪಡೆಗೊಂಡು 1 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1999 ರಲ್ಲಿ ಮಾರ್ಚ್ ನಲ್ಲಿ ಮಡಿಕೇರಿ ಘಟಕಕ್ಕೆ ವರ್ಗಾವಣೆಗೊಂಡು 19 ವರ್ಷಗಳ ಕಾಲ ಚಾಲಕರಾಗಿ ಕರ್ತವ್ಯ ನಿರ್ವಹಿಸಿ, 15.7.2017 ರಲ್ಲಿ ಸುಳ್ಯ ಘಟಕ ಪ್ರಾರಂಭವಾದ ನಂತರ ಸುಳ್ಯ ಘಟಕಕ್ಕೆ ಚಾಲಕರಾಗಿ ವರ್ಗಾವಣೆಗೊಂಡು, ನಂತರ 2025 ಜುಲೈ 2026 ಸೆಪ್ಟೆಂಬರ್ ವರೆಗೆ ಚಾಲಕ ಬೋಧಕರಾಗಿ ಕಾರ್ಯ ನಿರ್ವಹಿಸಿ 30.9.2026 ರಂದು ನಿವೃತ್ತಿ ಹೊಂದಿರುತ್ತಾರೆ.
ಪತ್ನಿ ಪದ್ಮಾವತಿ ಗೃಹಿಣಿಯಾಗಿದ್ದಾರೆ.
ಮೂವರು ಮಕ್ಕಳಿದ್ದು, ಪ್ರಥಮ ಪುತ್ರಿ ಶ್ರೀಮತಿ ಮಂಜುಳ ಡಿ. ಇವರು ಬಿ.ಎ.ಡಿಎಡ್ ಮಾಡಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಸರಕಾರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದ್ವಿತೀಯ ಪುತ್ರಿ ಶ್ರೀಮತಿ ಮಮತಾ ಡಿ. ರವರು ಎಂ.ಎ ಬಿ.ಎಡ್ ಮಾಡಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಪ್ರತಿಷ್ಠಿತ ಜ್ಞಾನಸಾಗರ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುತ್ರ ಉದಯಕುಮಾರ್ ಇವರು ಎಂ.ಎಸ್.ಡಬ್ಲ್ಯೂ ಮಾಡಿ ಸುಳ್ಯ ತಾಲೂಕಿನ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಮೆಡಿಕಲ್ ಸೋಷಿಯಲ್ ವರ್ಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.







