













ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆ ಹಿನ್ನಲೆ ಅರಂತೋಡು ಶಕ್ತಿ ಕೇಂದ್ರದ ಅರಂತೋಡು ಅಂಗನವಾಡಿಯಲ್ಲಿ ಶಿಕ್ಷಕಿ ಶ್ರೀಮತಿ ಹೊನ್ನಮ್ಮ , ಸಹಾಯಕಿ ದೇವಕಿ ಹಾಗೂ ಆಶಾಕಾರ್ಯಕರ್ತೆ ತಿರುಮಲೇಶ್ವರಿ ಅವರನ್ನು ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಸುಳ್ಯ ಮಂಡಲ ಸಮಿತಿಯ ಮತ್ತು ಮಹಿಳಾ ಮೋರ್ಚಾದ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ಉಪಾಧ್ಯಕ್ಷರಾದ ಶಿವಾನಂದ ಕುಕ್ಕುಂಬಳ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ಶಕ್ತಿ ಕೇಂದ್ರದ ಪ್ರಮುಖ್ ಲೋಹಿತ್ ಕಲ್ಲುಗದ್ದೆ, ಮಹಿಳಾ ಮೋರ್ಚದ ಸದಸ್ಯೆ ರಮ್ಯಾ ಪ್ರವೀಣ, ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀಮತಿ ವಿಮಲಾ, ಮಾಜಿ ಪಂಚಾಯಿತಿ ಸದಸ್ಯರು ಹಿರಿಯರಾದ ಯು ಯಶೋದ ಹೂವಯ್ಯ, ಹಿರಿಯವಾರದ ಗಂಗಮ್ಮಟೀಚರ್, ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ರತ್ನಾವತಿ ಹರಿಶ್ಚಂದ್ರ, ಕಾರ್ಯಕರ್ತರಾದ ಪ್ರವೀಣ್ ಎಲ್ಪಕಜೆ, ರೀನಾ ಶೇಖರ್, ಯು.ಕೆ. ಕಿಶೋರ್, ಚಂದ್ರಿಕಾ, ಹವ್ಯಾ, ಸುಹಾಸ್,ವೀಣಾ, ಗ್ರಾಮದ ಕಾರ್ಯಕರ್ತರು, ಮಕ್ಕಳ ಪೋಷಕರು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.







