













ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಓಪನ್ ಬಾಡಿ ಬಿಲ್ಡಿಂಗ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಿಮ್ ಟ್ರೈನರ್ ವಿಹಾರ್ ಕೆ ಯವರು 2 ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಇವರು ವಿದ್ಯಾಭ್ಯಾಸದ ನಂತರ ಬೆಂಗಳೂರು ಹಾಗೂ ಕಲ್ಕತ್ತಾದಲ್ಲಿ ಬಾಡಿ ಬಿಲ್ಡಿಂಗ್ ನಲ್ಲಿ ತರಬೇತಿ ಪಡೆದಿರುತ್ತಾರೆ. ಚೊಕ್ಕಾಡಿಯ ಕುಶಾಲಪ್ಪ ಗೌಡ ಮತ್ತು ಶ್ರೀಮತಿ ಶ್ಯಾಮಲ ದಂಪತಿಯ ಪುತ್ರರಾಗಿರುವ ಇವರು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿ. ರಥಬೀದಿಯಲ್ಲಿರುವ ಅರೈಝ್ ಫಿಟ್ ಲ್ಯಾಬ್ ಜಿಮ್ ಸೆಂಟರ್ ನಲ್ಲಿ ಪ್ರಸ್ತುತ ಟ್ರೈನರ್ ಆಗಿರುತ್ತಾರೆ.







