













ಕ್ಯಾoಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬೆಳ್ಳಾರೆ ಶಾಖೆಯ ಸದಸ್ಯ ದೇವದಾಸ ರೈ ಕೊಡಿಯಾಲ ಎಂಬವರಿಗೆ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾoಪ್ಕೋ ಸಹಾಯಧನದ ಸೆ. 26ರಂದು ವಿತರಿಸಲಾಯಿತು.
ಸಹಾಯಧನ ಮೊತ್ತ ರೂ.46,894/- ವನ್ನು ಸಂಸ್ಥೆಯ ನಿರ್ದೇಶಕ ಮುರಳೀಕೃಷ್ಣ ಕೆ.ಎನ್ ಮತ್ತು ಸದಸ್ಯರಾದ ಸುಭಾಶ್ಚಂದ್ರ ಅಯ್ಯನಕಟ್ಟೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ ಕುಮಾರ್ ಶೆಟ್ಟಿ ಹಾಗೂ ಬೆಳ್ಳಾರೆ ಶಾಖೆಯ ವ್ಯವಸ್ಥಾಪಕರಾದ ಅಶ್ವತ್ಥ ಕುಮಾರ್, ನಿಂತಿಕಲ್ ಶಾಖಾ ವ್ಯವಸ್ಥಾಪಕರಾದ ರಮೇಶ್ ಡಿ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.







