ಅ. 2 : ಪಂಜದಲ್ಲಿ ಕಂಬಳ ಆನಂದ ಗೌಡ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

0

ಮಾಡಬಾಗಿಲು ಕಂಬಳ ಆನಂದ ಗೌಡ ಟ್ರಸ್ಟ್ (ರಿ)ಕಂಬಳ , ಇವರ ವತಿಯಿಂದ ನೇ 11 ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅ. 2 ರಂದು ಬೆಳಿಗ್ಗೆ 9.30ಕ್ಕೆ ಪಂಜ ಸರಕಾರಿ ಪದವಿಪೂರ್ವ ಕಾಲೇಜುನಲ್ಲಿ ನಡೆಯಲಿದೆ. 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಭಾಗದಲ್ಲಿ ಸುಳ್ಯ ತಾಲೂಕು ಮಟ್ಟದಲ್ಲಿ ವಿದ್ಯಾರ್ಥಿ ವೇತನ ಪುರಸ್ಕೃತರಿಗೆ ರೂ. 10,00,000/-(ಹತ್ತು ಲಕ್ಷ)ದ ಶಾಶ್ವತ ವಿದ್ಯಾನಿಧಿಯ ಬಡ್ಡಿ ಹಣ ಗಳಿಕೆಯನ್ನು ವಿತರಿಸಲಾಗುವುದು.