ಕುಲಾಲ ಸುಧಾರಕ ಸೇವಾ ಸಂಘದ ವಾರ್ಷಿಕ ಮಹಾಸಭೆ – ಸನ್ಮಾನ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ಸೆ.27 ರಂದು ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಬೆಳ್ಳಾರೆ ದೇವಿ ಹೈಟ್ಸ್ ನಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿ ಧನಂಜಯ ಕಲ್ಮಡ್ಕ ವರದಿ ಮಂಡಿಸಿದರು. ಅತಿಥಿಗಳಾಗಿ ಪುತ್ತೂರು ಅಂಚೆ ಇಲಾಖೆಯ ಅಂಚೆ ಸಹಾಯಕಿ ಶ್ರೀಮತಿ ಮಮತಾ ಸೀತಾರಾಮ,ಉಡುಪಿ‌ ಕಟಪಾಡಿ ತ್ರಿಶಾ ವಿದ್ಯಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ಉಪಸ್ಥಿತರಿದ್ದು ಮಾತನಾಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ದಿನೇಶ್ ಮೊಗಪ್ಪೆ ಲೆಕ್ಕಪತ್ರ ಪತ್ರ ಮಂಡನೆ ಮಾಡಿದರು. ವಿಶ್ವನಾಥ ಕುಲಾಲ್ ಆಯ ವ್ಯಯ ಪಟ್ಟಿ ಮಂಡಿಸಿದರು. ಗಣೇಶ್ ಕುಲಾಲ್ ಸನ್ಮಾನಿತ ವಿದ್ಯಾರ್ಥಿಗಳ ಸನ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುಮಿತ್ರ ಮಣಿಮಜಲು,ನಿಕಡಪೂರ್ವ ಅಧ್ಯಕ್ಷ ಶೈಲೇಶ್ ನೆಟ್ಟಾರು, ನಿರ್ದೇಶಕರಾದ ದಿನೇಶ್ ಮೊಗಪ್ಪೆ,ಯೋಗೀಶ ದೇವರಗುಂಡಿ,ಹರೀಶ್ ಅರಂಬೂರು,ಲಕ್ಷ್ಮಣ ಮುಂಡುಗಾರು,ಸುಕುಮಾರ ಸುಬ್ರಹ್ಮಣ್ಯ,ಪುಷ್ಪರಾಜ ಮಜಿಗುಂಡಿ,ಲಲಿತ ನಾಗಪ್ಪ ಕುಲಾಲ್,ಗೌರವ ಸಲಹೆಗಾರರಾದ ಶಶಿಧರ ಕುಲಾಲ್ ಉಪಸ್ಥಿತರಿದ್ದರು. ಮಧ್ಯಾಹ್ನ ಊಟದ ಬಳಿಕ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿತ್ತು.