ಪೆರುವಾಜೆಯಲ್ಲಿ ಮನರಂಜಿಸಿದ ಭಾವೈಕ್ಯ ಸ್ವರ್ಣ ಸಂಭ್ರಮದ ಅಂಗವಾಗಿ ಕೆಸರುಗದ್ದೆ ಕ್ರೀಡಾಕೂಟ

0

ಕೆಸರು ಗದ್ದೆ ಕ್ರೀಡಾಕೂಟದಿಂದ ಗ್ರಾಮೀಣ ಪ್ರದೇಶದ ಸಂಸ್ಕೃತಿ ಉಳಿವು : ಭಾಗೀರಥಿ ಮುರುಳ್ಯ

ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವೈಕ್ಯ ಯುವಕ ಮಂಡಲ ಪೆರುವಾಜೆ,ಭಾವೈಕ್ಯ ಮಹಿಳಾ ಮಂಡಲ ಪೆರುವಾಜೆ ,ಭಾವೈಕ್ಯ ಚಿಗುರು ವೇದಿಕೆ ಪೆರುವಾಜೆ ಇದರ ವತಿಯಿಂದ ಭಾವೈಕ್ಯ ಸ್ವರ್ಣ ಸಂಭ್ರಮದ ಅಂಗವಾಗಿ ಕಂಡಡೊಂಜಿ ದಿನ ಕೆಸರುಗದ್ದೆ ಕ್ರೀಡಾಕೂಟ ಸೆ.27 ರಂದು ಪೆರುವಾಜೆ ಪೇರಜ್ಜ ಗದ್ದೆಯಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯರವರು ಕ್ರೀಡಾಕೂಟವನ್ನು ದೀಪಬೆಳಗಿಸಿ ಉದ್ಘಾಟಿಸಿ ,ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಮಾಡುವುದರಿಂದ ಗ್ರಾಮೀಣ ಸಂಸ್ಕೃತಿ,ಸಂಸ್ಕಾರ ಉಳಿಯಲು ಸಾಧ್ಯ. ಈಗಿನ ಜನರಿಗೆ ಮಣ್ಣಿನ ಸೊಗಡನ್ನು ಪರಿಚಯಿಸುವುದರ ಅಗತ್ಯ ಇದೆ.ಇದರಿಂದ ಆರೋಗ್ಯಪೂರ್ಣ ಜೀವನ ಸಾಧ್ಯ.ಭಾವೈಕ್ಯ ಯುವಕ ಮಂಡಲದಿಂದ ಉತ್ತಮ ಸಂಘಟನಾತ್ಮಕ ಕೆಲಸ ಆಗಿದೆ ಎಂದು ಹೇಳಿದರು. ಭಾವೈಕ್ಯ ಯುವಕ ಮಂಡಲದ ಅಧ್ಯಕ್ಷ ವಾಸುದೇವ ಪೆರುವಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕ್ಯಾಂಪ್ಕೋ ನಿರ್ದೇಶಕಿ ಮಾಲಿನಿ ಪ್ರಸಾದ್,ಪೆರುವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವೆಂಕಟಕೃಷ್ಣ ರಾವ್,ಅಭಿಷೇಕ್ ಶೆಟ್ಟಿ ಪೇರಜ್ಜ, ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ,ಭಾವೈಕ್ಯ ಯುವಕ ಮಂಡಲದ ಗೌರವಾಧ್ಯಕ್ಷ ಜಯಪ್ರಕಾಶ್ ರೈ, ಭಾವೈಕ್ಯ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸವಿತ,ಚಿಗುರು ಯುವ ವೇದಿಕೆ ಅಧ್ಯಕ್ಷ ಸೃಜನ್ ಆಚಾರ್ಯ ವೇದಿಕೆಯಲ್ಲಿದ್ದರು. ರಜನೀಶ್ ಪೆರುವಾಜೆ ಸ್ವಾಗತಿಸಿ,ಗಣೇಶ್ ಕೊಲ್ಯ ಕಾರ್ಯಕ್ರಮ‌ ನಿರೂಪಿಸಿದರು. ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳು ನಡೆದವು. ಬೆಳಿಗ್ಗೆಯಿಂದ ಕೆಸರುಗದ್ದೆಯಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು ಕ್ರೀಡಾಪಟುಗಳು ಕೆಸರಲ್ಲಿ ಸಂಭ್ರಮಿಸಿ ಖುಷಿಪಟ್ಟರು.