ಅ.2 ರಿಂದ 4 ಸುಳ್ಯದಲ್ಲಿ ” ಸ್ವದೇಶಿ ಆಹಾರ ಮೇಳ

0

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರ ನೇತೃತ್ವದಲ್ಲಿ ಶಕ್ತಿ ಈವೆಂಟ್ಸ್ ಆಶ್ರಯದಲ್ಲಿ ಸುಳ್ಯದ ದುರ್ಗಾ ಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ ಅ. 2 ರಿಂದ 4 ರವರೆಗೆ ” ಸ್ವದೇಶಿ ಆಹಾರ ಮೇಳ ” ನಡೆಯಲಿದೆ.

ಮಳಿಗೆಯಲ್ಲಿ ವಿವಿಧ ತಿಂಡಿ ತಿನಿಸುಗಳು, ಖಾದಿ ಬಟ್ಟೆಗಳ ಮಳಿಗೆ, ಮಸಾಲ ಪದಾರ್ಥಗಳ ಮಳಿಗೆ, ಕರಕುಶಲ ಮಳಿಗೆ, ಗೃಹ ಉಪಯೋಗಿ ವಸ್ತುಗಳ ಮಳಿಗೆಗಳು ಆಕರ್ಷಣೀಯ ವಾಗಲಿದೆ.

ಇಲ್ಲಿ ನಡೆಯುವ ಆಹಾರ ಮೇಳಕ್ಕೆ ಸುಳ್ಯ ಜನತೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಮಳಿಗೆಗೆ ಭೇಟಿ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.