ಪೆರುವಾಜೆ : ಪ್ರಧಾನಿ ನರೇಂದ್ರ ಮೋದಿಯವರ 138 ನೇ “ಮನ್ ಕೀ ಬಾತ್ ” ವೀಕ್ಷಣೆ

0

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮ ‘ಮನ್ ಕೀ ಬಾತ್‌’ 138 ನೇ ಸಂಚಿಕೆಯನ್ನು ಪೆರುವಾಜೆ ಪೇರಜ್ಜ ಅಭಿಷೇಕ್ ಶೆಟ್ಟಿ ರವರ ನಿವಾಸದಲ್ಲಿ ಸೆ. 27 ರಂದು ಬಿಜೆಪಿ ಮುಖಂಡರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತರಿದ್ದು , ಮಾತಾಡಿದ ಅವರು ” ನಮ್ಮ ದೇಶದ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ದೇಶದ ಅಭಿವೃದ್ಧಿಯ ಪಥ, ಸಮಾಜ ಮುಖಿ ಕಾರ್ಯ, ಸಾಧನೆಗಳು ಕುರಿತು ಜನರಿಗೆ ತಿಳಿಸುವಂತೆ ಇಂದು 138 ನೇ “ಮನ್ ಕಿ ಬಾತ್ ” ಕಾರ್ಯಕ್ರಮ ಯಶಸ್ವಿಯೊಂದಿಗೆ ನಡೆಯುತ್ತಿದ್ದು , ಪ್ರಧಾನಿ ಅವರ ಆದರ್ಶ ನಡೆ ನುಡಿಗಳನ್ನು , ಹಾದಿಗಳನ್ನು ಕಾರ್ಯಕರ್ತರು ಸೇರಿದಂತೆ ಮುಂದಿನ ತಲೆಮಾರಿನವರು
ಅಳವಡಿಸಿಕೊಂಡು ನಮ್ಮ ದೇಶವನ್ನು ಅಭಿವೃದ್ಧಿಯತ್ತ ಕೊಂಡುಹೋಗುವ ಕಾರ್ಯಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕಿ ಶ್ರೀಮತಿ ಮಾಲಿನಿ ಪ್ರಸಾದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪಿ.ಜಿ .ಎಸ್ ಎನ್ ಪ್ರಸಾದ್ , ಪದ್ಮನಾಭ ಶೆಟ್ಟಿ ಪೆರುವಾಜೆ, ವೆಂಕಟಕೃಷ್ಣ ರಾವ್ , ಜಯಪ್ರಕಾಶ್ ರೈ ಪೆರುವಾಜೆ, ಹರ್ಷಿತ್ ಪೆರುವಾಜೆ , ಪುರುಷೋತ್ತಮ , ವಿಜಯ,
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಮೇಶ್ ಅವರು ಸರ್ವರನ್ನು ಸ್ವಾಗತಿಸಿ , ಹರ್ಷಿತ್ ಪೆರುವಾಜೆ ವಂದಿಸಿದರು.