















ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ಕೊಡಗು ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಡಿಕೇರಿ ತಾಲೂಕು ಹಾಗೂ ಸಂಪಾಜೆ ಸಂಯುಕ್ತ ಪದವಿ ಪೂರ್ವಕಾಲೇಜು, ಸಂಪಾಜೆ ಇದರ ಜಂಟಿ ಆಶ್ರಯದಲ್ಲಿ 14 ಮತ್ತು 17ರ ವಯೋಮಾನದ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟವು ಸೆ. 22 ರಂದು ಸಂಪಾಜೆ ಕಾಲೇಜು ಮೈದಾನದಲ್ಲಿ ಜರಗಿತು.
ಉದ್ಘಾಟನೆಯನ್ನು ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಯು.ಬಿ. ಚಕ್ರಪಾಣಿಯವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಸಂಚಾಲಕರಾದ ಯಂ ಶಂಕರನಾರಾಯಣ ಭಟ್ ನೆರವೇರಿಸಿದರು. ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀನಿವಾಸ್ ಇವರು ಉಪಸ್ಥಿತರಿದ್ದು ಕ್ರೀಡಾಕೂಟಕ್ಕೆ ಶುಭಹಾರೈಸಿದರು. ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯ 3 ತಾಲೂಕಿನಿಂದ ಸುಮಾರು 120 ಕ್ರೀಡಾಪಟುಗಳು, 15 ಜನ ತೀರ್ಪುಗಾರರು, ತಂಡದ ವ್ಯವಸ್ಥಾಪಕರು ಭಾಗವಹಿಸಿದರು.ಕ್ರೀಡಾಕೂಟದಲ್ಲಿ 14 ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರೌಢಶಾಲೆ ಭಾಗಮಂಡಲ, ಮಡಿಕೇರಿ ತಾಲೂಕು ಪ್ರಥಮ, ಜ್ಞಾನೋದಯ ಪ್ರೌಢಶಾಲೆ ಕೂಡಿಗೆ, ಸೋಮವಾರಪೇಟೆ ತಾಲೂಕು ದ್ವಿತೀಯ ಸ್ಥಾನ ಪಡೆದುಕೊಂಡಿತು. 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸರಕಾರಿ ಮಾದರಿ ಹಿರಿಯರ ಪ್ರಾಥಮಿಕ ಶಾಲೆ, ಸಂಪಾಜೆ, ಮಡಿಕೇರಿ ತಾಲೂಕು ಪ್ರಥಮ, ಸರಕಾರಿ ಪ್ರೌಢಶಾಲೆ ಕುಶಾಲನಗರ ದ್ವಿತೀಯ ಸ್ಥಾನ ಪಡೆದುಕೊಂಡಿತು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಜಿ.ಪಿ.ಯು ಪ್ರೌಢಶಾಲೆ ಆಲೂರು-ಸಿದ್ದಾಪುರ, ಸೋಮವಾರಪೇಟೆ ತಾಲೂಕು ಪ್ರಥಮ ಹಾಗೂ ಸರ್ವದೈವತ ಪ್ರೌಢಶಾಲೆವಿರಾಜಪೇಟೆ, ದ್ವಿತೀಯ ಸ್ಥಾನ ಪಡೆದುಕೊಂಡಿತು. 17 ರ ವಯೋಮಾನದ ಬಾಲಕರ ವಿಭಾಗದಲ್ಲಿ ವಿಜಯಲಕ್ಷ್ಮೀ ಪ್ರೌಢ ಶಾಲೆ ಬಾಳಲೆ ವಿರಾಜಪೇಟೆ ಪ್ರಥಮ ಸ್ಥಾನ , ಮೂಕಾಂಬಿಕ ಪ್ರೌಢ ಶಾಲೆ ಕುಶಾಲನಗರ ದ್ವಿತೀಯ ಸ್ಥಾನ ಪಡೆದು ಕೊಂಡಿತ್ತು.
ಸಂಪಾಜೆ ಸಂಯುಕ್ತ ಪ್ರೌಢಶಾಲೆಯ 8ನೇ ತರಗತಿಯ ಮಿಲನ್ ಎಸ್.ಯು. ಹಾಗೂ ನಮನ್ ಎನ್. ಎ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಉಡುಪಿಯಲ್ಲಿ ನಡೆಯಲಿರುವ ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.ಕಾರ್ಯಕ್ರಮವನ್ನು ಶ್ರೀ. ಕುಶಾಲಪ್ಪ ಕೆ, ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರು ಸಂಯೋಜಿಸಿದರು, ಸಂಸ್ಥೆಯ ಎಲ್ಲಾ ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂಸ್ಥೆಯ ಪ್ರಾಂಶುಪಾಲರಾರು ಲೋಕ್ಯಾ ನಾಯ್ಕ್ .ಬಿ ಸ್ವಾಗತಿಸಿದರು. ಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ . ಎ. ಐತ್ತಪ್ಪ ಇವರು ವಂದಿಸಿದರು. ಕೊಡಗು ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಸಂಸ್ಥೆಯ ಸಮಾಜ ವಿಜ್ಞಾನ ಶಿಕ್ಷಕರಾದ ಹೆಚ್. ಜಿ. ಕುಮಾರ್ರವರು ಕಾರ್ಯಕ್ರಮದ ನಿರೂಪಿಸಿದರು. ಕ್ರೀಡಾಕೂಟದಲ್ಲಿ ನೆರೆದಿರುವ ಎಲ್ಲರಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.







