ಸುಳ್ಯ ಅಮೃತ್ 2 ಯೋಜನೆಯ ಕಾಮಗಾರಿಯಿಂದ ಆದ ರಸ್ತೆ ಹೊಂಡಗಳಿಗೆ ಡಾಂಬರೀಕರಣ ಆರಂಭ

0

ಜ್ಯೋತಿ ವೃತ್ತದಿಂದ ಹಳೆಗೇಟಿನವರೆಗೆ ಕಾಮಗಾರಿ ಪ್ರಗತಿಯಲ್ಲಿ

ಸುಳ್ಯ ನಗರದ ಅಮೃತ್ 2 ಯೋಜನೆಯ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಸಲು ಅಗೆದಿದ್ದ ಹೊಂಡಗಳಿಂದ ಆಗಿರುವ ರಸ್ತೆ ಸಮಸ್ಯೆಯ ಬಗ್ಗೆ ಹೊಂಗಳಿಗೆ ಡಾಮರೀಕರಣ ಪ್ಯಾಚ್ ವರ್ಕ್ ಮಾಡುವ ಕಾರ್ಯ ಆರಂಭಗೊಂಡಿದೆ.

ಸುಳ್ಯದ ಜ್ಯೋತಿ ವೃತ್ತ,ಹಳೆಗೇಟು, ಗಾಂಧಿನಗರ ಮಸೀದಿ ಬಳಿ, ಆಲೆಟ್ಟಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ತೊಡಕುಗಳು ಉಂಟಾಗುತ್ತಿತ್ತು. ಅಲ್ಲದೆ ರಸ್ತೆಯುದ್ದಕ್ಕೂ ಬದಿಯಲ್ಲಿ ಅಗೆದಿರುವ ಹೊಂಡಗಳಿಂದ ಮಳೆಗಾಲದಲ್ಲಿ ವಾಹನ ಸುವಾರಿಗೆ ಸಮಸ್ಯೆ ಉಂಟಾಗುತ್ತಿತ್ತು.

ಈ ಬಗ್ಗೆ ಅನೇಕ ಬಾರಿ ಸುದ್ದಿ ಮಾಧ್ಯಮದಲ್ಲಿ ವರದಿಯನ್ನು ಬಿತ್ತರಿಸಿದ್ದು, ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ಅನೇಕ ಬಾರಿ ಮಾಹಿತಿಯನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಸಂಬಂಧ ಪಟ್ಟವರು ಹೊಂಡಗಳಿಗೆ ತಾತ್ಕಾಲಿಕ ಸಿಮೆಂಟ್ ಕಾಮಗಾರಿಯ ಪ್ಯಾಚ್ ವರ್ಕ್ ಮಾಡಿದ್ದು ಅದು ಮಳೆಯ ಕಾರಣದಿಂದ ಅದು ಎದ್ದು ಹೋಗಿ ಮತ್ತೆ ಸಮಸ್ಯೆಗಳ ಮಹಾಪೂರವೇ ಉಂಟಾಗಿತ್ತು. ಇದೀಗ ಸಂಬಂಧ ಪಟ್ಟ ಗುತ್ತಿಗೆದಾರರು ಡಾಮರೀಕರಣದ ಪ್ಯಾಚ್ ವರ್ಕ್ ಕೆಲಸ ಆರಂಭಗೊಳಿಸಿದ್ದು ಈ ಕೆಲಸ ಕಾರ್ಯ ಸುಳ್ಯ ನಗರದ ಎಲ್ಲಾ ವಾರ್ಡ್ಗಳಲ್ಲಿ ಮಾಡಲಿದ್ದೇವೆ ಎಂದು ಸುದ್ದಿಗೆ ಮಾಹಿತಿಯನ್ನು ನೀಡಿದ್ದಾರೆ.