














ಸುಳ್ಯದ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವತಿಯಿಂದ ಪ್ರತಿವರ್ಷ ನಡೆಸಲಾಗುವ ಬಿಪಿಎಲ್ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಈ ವರ್ಷವೂ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ.
ಮುಂಡೋಡಿ ಪುರುಷೋತ್ತಮ ಗೌಡ ಮತ್ತು ತೇಜೇಶ್ವರಿ ದಂಪತಿಯ ಪುತ್ರಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ಜನನಿ ಎಂ.ಪಿ ಹಾಗೂ ಸುಳ್ಯದ ವಿವೇಕಾನಂದ ಸಂಕೀರ್ಣದ ಸಿದ್ದಿಕ್ ಪಿ.ಎ ಮತ್ತು ಫಾತಿಮತ್ ಸೆಮೀರಾ ದಂಪತಿಯ ಪುತ್ರಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸೀಮ ಆಯಿಷಾ ಇವರು ಬಿಪಿಎಲ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ನಿಯಮಾನುಸಾರ ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿರುವುದಾಗಿ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







