ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ















ಕಾಯರ್ತ್ತೋಡಿ ವರದಾಯಿನಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.11 ರಿಂದ 20ರ ವರೆಗೆ 23ನೇ ವರ್ಷದ ನವರಾತ್ರಿ ಮತ್ತು ವಿಜಯದಶಮಿ ಮಹೋತ್ಸವವು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದೇವಲದ ಆವರಣದಲ್ಲಿ ನಡೆಯಿತು.
ಮರಕಡದ ಶ್ರೀ ಯೋಗೀಶ್ವರೇಶ್ವರ ನರೇಂದ್ರನಾಥ ಸ್ವಾಮಿ, ಮಂಗಳೂರು ಮತ್ತು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ರವೀಶ್ ತಂತ್ರಿ ಗಳ ನೇತೃತ್ವದಲ್ಲಿ ನವರಾತ್ರಿ ಮತ್ತು ವಿಜಯದಶಮಿ ನಡೆಯಲಿದೆ.
ಆಮಂತ್ರಣ ಬಿಡುಗಡೆಯ ಸಂದರ್ಭದಲ್ಲಿ ಅರ್ಚಕರಾದ ವಿಶ್ವಾಸ್ ಯಂ ಭಟ್, ಟ್ರಸ್ಟನ ಅಧ್ಯಕ್ಷ ಡಿ.ಕೆ. ಸಂದೀಪ್, ಟ್ರಸ್ಟ್ ನ ಕಾರ್ಯದರ್ಶಿ ಡಿ.ಎಸ್., ದಿವ್ಯಾನಂದ, ಕೋಶಾಧಿಕಾರಿ ಡಾ.ಪ್ರವೀಣ್ ಡಿ ಎಸ್, ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಕುತ್ಯಾಡಿ, ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ವಾಸುದೇವ, ಕಾರ್ಯದರ್ಶಿ ಪ್ರಭಾಕರ ಎಸ್.ನ್, ಕೋಶಾಧಿಕಾರಿ ಡಿ ಕೆ ಶುಭಾಶ್, ಸಂಚಾಲಕರಾದ ಡಿ.ಕೆ. ಪ್ರದೀಪ್, ಡಿ.ಎಸ್. ಗಿರೀಶ್ ವೆಂಕಟ್ರಮಣ ದೆಂಗೋಡಿ, ವಾಸುದೇವ ಬೆಳ್ಳಿಪ್ಪಾಡಿ ಮತ್ತು ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.







