













2025-26 ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮಂಗಳೂರು, ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು, ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-ಇಂದ್ರಪ್ರಸ್ಥ ಆಡಿಟೋರಿಯಂ, ಉಜಿರೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ 100 ಶೇಕಡಾ ಫಲಿತಾಂಶಕ್ಕಾಗಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಸಮ್ಮಾನಿಸಲಾಯಿತು.
ಪದವಿ ಪೂರ್ವ ಕಾಲೇಜು ಗುತ್ತಿಗಾರು ಸತತ ಎರಡನೇ ಬಾರಿಗೆ 100 ಶೇಕಡಾ ಫಲಿತಾಂಶ ಪಡೆದುಕೊಂಡಿದ್ದೆ, ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ,ರಾಜ್ಯಶಾಸ್ತ್ರ ಉಪನ್ಯಾಸಕ ರಂಜಿತ್ ಅಂಬೆಕಲ್ಲು, ಕನ್ನಡ ಉಪನ್ಯಾಸಕರಾದ ಸವಿತಾ ಕುಮಾರಿ, ಇತಿಹಾಸ ಉಪನ್ಯಾಸಕರಾದ ಪ್ರೀತಿ.ಪಿ ರೈ, ವಾಣಿಜ್ಯ ಶಾಸ್ತ್ರ ಉಪನ್ಯಾಸರಾದ ದೀಪ್ತಿ.ಐ.ಪಿ, ಹಾಗೂ ದೀಕ್ಷಾ.ಯಂ.ಬಿ, ಇಂಗ್ಲಿಷ್ ಉಪನ್ಯಾಸಕರಾದ ದಿವ್ಯ.ಎ, ಸಮಾಜ ವಿಜ್ಞಾನ ಉಪನ್ಯಾಸಕರಾದ ಗ್ರಾಯತ್ರಿ.ಕೆ ಇವರು ಗೌರವ ಸ್ವೀಕರಿಸಿದರು.







