ಎನ್ಎಂಸಿ: ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭ ಮತ್ತು ಉದ್ಯಮಶೀಲತಾ ವಿಚಾರ ಸಂಕಿರಣ

0

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಉದ್ಯಮಶೀಲತಾ ಸಂಕಿರಣವನ್ನು ದಿನಾಂಕ 28 ಸೆಪ್ಟೆಂಬರ್ 2026 ರಂದು ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀಪತಿ ಭಟ್ ಸುಳ್ಯ ರವರು ನೆರವೇರಿಸಿ ಶುಭ ಹಾರೈಸಿದರು.
ಕೊಡಗು ಜಿಲ್ಲೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ವೇಣುಗೋಪಾಲ್ ರವರು ಉದ್ಯಮಶೀಲ ಕೌಶಲ್ಯದ ಉಪಯೋಗ ಹಾಗೂ ಬಳಕೆ ಯ ಬಗ್ಗೆ ಮಾಹಿತಿ ನೀಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ರುದ್ರ ಕುಮಾರ್ ಎಂ ಎಂ ವಹಿಸಿದ್ದರು. ದ್ವಿತೀಯ ಬಿಕಾಂ ನ ವಿದ್ಯಾರ್ಥಿನಿಯರಾದ ದಿಶಾ ಮತ್ತು ಸಂಜನಾ ಪ್ರಾರ್ಥನೆಯನ್ನುಗೈದರು. ವಾಣಿಜ್ಯಶಾಸ್ತ್ರ ಸಂಘದ ಸಂಚಾಲಕರಾದ ದಿವ್ಯ ಟಿ.ಎಸ್ .ರವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಶ್ರೀಧರ್ .ವಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಎರಡನೇ, ನಾಲ್ಕನೇ, ಆರನೇ ಸೆಮಿಸ್ಟರ್ ನ ಬಿ. ಕಾಮ್ ತರಗತಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಗೀತಾ ಶೆಣೈ,ರಮ್ಯ ಎಸ್ ಕೆ, ಗ್ರಂಥಪಾಲಕರಾದ ಉಮೇಶ್ ಹಾಗೂ ವಾಣಿಜ್ಯಶಾಸ್ತ್ರ ಸಂಘದ ವಿದ್ಯಾರ್ಥಿ ಸಂಚಾಲಕರಾದ ಗೌತಮ್ .ಕೆ ಹಾಗೂ ಚಸ್ಮಿತಾ ಕೆ. ಆರ್ ಹಾಗೂ ಅಂತಿಮ ತರಗತಿಯ ಪ್ರತಿನಿಧಿಯಾದ ಅಭಿನಂದನ್ ಬಿ. ಎಸ್, ಅನ್ವಿತ ಆರ್ ಭಟ್ ರವರು ಉಪಸ್ಥಿತರಿದ್ದರು.
ಅಂತಿಮ ಬಿಕಾಂ ತರಗತಿಯ ವಿದ್ಯಾರ್ಥಿನಿ ಕುಮಾರಿ ಚಸ್ಮಿತ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ,
ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿಯಾದ ಆರ್ಸಿದರ ವರು ವಂದನಾರ್ಪಣೆಯನ್ನು ನೆರವೇರಿಸಿದರು.