






















ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಇದರ ಮಹಾಸಭೆ ಹಾಗೂ ಸುಳ್ಯದ ಹಿರಿಯ ವರ್ತಕರಿಗೆಸನ್ಮಾನ ಕಾರ್ಯಕ್ರಮ ಸೆ.29 ಮಂಗಳವಾರದಂದು ವರ್ತಕರ ಸಮುದಾಯ ಭವನ” ಅಂಬಟೆಡ್ಕ, ಸುಳ್ಯದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ ವಹಿಸಿದರು. ಉಪಾಧ್ಯಕ್ಷ ಡಿ ಎಸ್ ಗಿರೀಶ್ ಸ್ವಾಗತಿಸಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಮಂಡಿಸಿದರು. ಕೋಶಾಧಿಕಾರಿ ಹೇಮಂತ್ ಕಾಮತ್ ಲೆಕ್ಕಪತ್ರ ಮಂಡಿಸಿದರು. ಸುಳ್ಯದಲ್ಲಿ ವಾಣಿಜ್ಯ ವ್ಯಾಪಾರೋದ್ಯಮ & ಕೈಗಾರಿಕೋದ್ಯಮದಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಿರಿಯರನನು ಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಬಿಡಿಓ ಮೀನಾಕ್ಷಿ ಗೌಡ,ನಿವೃತ್ತ ಪ್ರಾಂಶುಪಾಲರು ಲಿಂಗಪ್ಪ ಗೌಡ,ಡಾ.ಕೃಷ್ಣ ಭಟ್ ಜಾಲ್ಸೂರು,ಅಬೂಭಕ್ಕರ್ ಕಟ್ಟೆಕ್ಕಾರ್,ರಾಘವ ಕಲ್ಯಾಣ್ ಟೆಕ್ಸ್ ಟೈಲ್ಸ್,ಅ್ಯಂಬುಲೆನ್ಸ್ ಚಾಲಕ ಹನೀಫ್ ನಿರಂತರ ಸ್ವಚ್ಚತಾ ಕೆಲಸ ಮಾಡುವ ರಾಜು ರವರು ವರ್ತಕರ ಸಂಘದ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿದರು.
ಉಪಾಧ್ಯಕ್ಷ ಸಿಎ ಪಿ ಗಣೇಶ ಭಟ್, ಪ್ರಭಾಕರ್ ನಾಯರ್ ಸ್ವಾಗತ್,ಮಂಜುನಾಥ್ ರೈ,ಆದಂ ಹಾಜಿ ಕಮ್ಮಾಡಿ,ಡಿ.ಎಸ್ ಗಿರೀಶ್,ಮಂಜುನಾಥ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರಾದ ಎಂ ಸುಂದರ ರಾವ್ ರೂಪಾ, , ಶ್ಯಾಮ್ ಪ್ರಸಾದ್ ಅಡ್ಯಂತ್ತಡ್ಕ,ಸಾಂಗ್ ಸಿಂಗ್, ಹಾಜಿ ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್ ,ಅಬ್ದುಲ್ ಮಜೀದ್ ಜನತಾ,ವಿನಯ ಕುಮಾರ್ ಕಂದಡ್ಕ,ಸುಂದರೇಶ್ ಭಟ್ ಜಾಲ್ಸೂರು,ಕಸ್ತೂರಿ ಶಂಕರ್ ನಿಸರ್ಗ ಇದ್ದರೂ.
ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ ಮತ್ತು ಜಗನ್ನಾಥ ರೈ ಪಿ ಕಾರ್ಯಕ್ರಮ ನಿರೂಪಿಸಿದರು.







