ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲನೆಗೆ ಸಮಿತಿ ರಚನೆ : ಸುಕುಮಾರ್ ಕೋಡ್ತುಗುಳಿ ಸ್ವಾಗತ

0

ಕರಾವಳಿ‌ ಕರ್ನಾಟಕದ ಭಾಗದಲ್ಲಿ‌ ಕರ್ನಾಟಕ ಹೈಕೋರ್ಟ್ ನ ಶಾಶ್ವತ ಪೀಠ ಅಥವಾ ಸರ್ಕ್ಯೂಟ್ ಬೆಂಚ್ ಸ್ಥಾಪನೆ‌ ಬಗ್ಗೆ ಪರಿಶೀಲನೆಗೆ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಸಮಿತಿ ರಚಿಸಿರುವುದನ್ನು ಸುಳ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ದ.ಕ.‌ಜಿಲ್ಲಾ‌ ವಕೀಲರ ಸಂಘದ ಉಪಾಧ್ಯಕ್ಷರಾಗಿರುವ ಸುಕುಮಾರ್ ಕೋಡ್ತುಗುಳಿಯವರು ಸ್ವಾಗತಿಸಿದ್ದಾರೆ.

ಕಳೆದ‌ ಕೆಲವು ವರ್ಷಗಳಿಂದ ಕರಾವಳಿ ಭಾಗದಲ್ಲಿ ಎಲ್ಲಾ ವ್ಯವಸ್ಥಿತ ಸೌಲಭ್ಯಗಳಿರುವ ದ.ಕ. ಜಿಲ್ಲಾ ಕೇಂದ್ರಭಾಗವಾದ ಮಂಗಳೂರಿನಲ್ಲಿ ಹೈಕೋರ್ಟ್ ಶಾಶ್ವತ ಪೀಠ ಅಥವಾ ಸರ್ಕ್ಯೂಟ್ ಬೆಂಚ್ ಸ್ಥಾಪನೆ‌ ಬಗ್ಗೆ ಹೋರಾಟಗಳು ನಡೆಯುತ್ತಿದ್ದು ರಾಜಕೀಯ ನಾಯಕರುಗಳು, ಜನಪ್ರತಿನಿಧಿಗಳು ಪಕ್ಷ‌ ಭೇದವಿಲ್ಲದೆ ಶ್ರಮಿಸುತ್ತಿರುವುದು ಅಭಿನಂದನಾರ್ಹ. ಕರಾವಳಿ‌ ಭಾಗದ ಜನರಿಗೆ ನ್ಯಾಯಾಂಗ ಇಲಾಖೆಯ ಸೇವೆಗಳು ಸುಲಭವಾಗಿ ಹಾಗೂ ಶೀಘ್ರವಾಗಿ ದೊರೆಯುವಂತಾಗಲು ಹೈಕೋರ್ಟ್ ಪೀಠ ಸ್ಥಾಪನೆ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ‌ ತ್ರಿಸದಸ್ಯ ಸಮಿತಿ‌ ಸ್ವಾಗತಾರ್ಹವಾಗಿದೆ ಎಂದವರು ತಿಳಿಸಿದ್ದಾರೆ.