
ದುಗ್ಗಲಡ್ಕದ ಕೊಯಿಕುಳಿ ಸ.ಹಿ.ಪ್ರಾ.ಶಾಲೆಗೆ
ಜಿಲ್ಲಾ ಪಂಚಾಯತ್ ಅನುದಾನ ರೂ 5.20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶೌಚಾಲಯದ ಉದ್ಘಾಟನೆ ಶಾಲಾ ಸಮವಸ್ತ್ರ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮ ಸೆ.30ರಂದು ನಡೆಯಿತು.















ಸುಳ್ಯ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಭಾಗವಹಿಸಿ ಶೌಚಾಲಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿಯ ಅಧ್ಯಕ್ಷರಾದ ರಾಮಕೃಷ್ಣ ಕೆ. ನಡುಬೆಟ್ಟು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಳ್ಯ ರೋಟರಿ ಸಿಟಿ ಅಧ್ಯಕ್ಷ ರಾಕೇಶ್ ರಾಘವ್ ,ಪದಾಧಿಕಾರಿ ಗುರು ವಿಕ್ರಂ, ಸುಳ್ಯದ ಎಸ್ ಬಿ ಮೆಡಿಕಲ್ ಲ್ಯಾಬ್ ಮಾಲಕ ಬಾಲಕೃಷ್ಣ ಎಂ.,ನ.ಪಂ.ಮಾಜಿ ಅಧ್ಯಕ್ಷರಾದ ಶೀಲಾವತಿ ಮಾಧವ ದುಗಲಡ್ಕ, ಮತ್ತು ಶ್ರೀಮತಿ ಶಶಿಕಲಾ ನೀರಬಿದಿರೆ, ಮುಖ್ಯೋಪಾಧ್ಯಾಯರಾದ ಬೆಳ್ಯಪ್ಪ ಕೋಡ್ತುಗುಳಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರೂ 32 ಸಾವಿರ ವೆಚ್ಚದಲ್ಲಿ ಇನ್ವರ್ಟರ್ ನೀಡಿದ ರೋಟರಿ ಸಿಟಿ ಅಧ್ಯಕ್ಷರು ಪದಾಧಿಕಾರಿಗಳನ್ನು ಗೌರವಿಸಲಾಯಿತು. ಶಾಲಾ ಸಮವಸ್ತ್ರಕ್ಕಾಗಿ ಕೊಡುಗೆ ನೀಡಿದ ದಾನಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಶಾಸಕರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಬೆಳ್ಯಪ್ಪ ಕೋಡ್ತುಗುಳಿ ಸ್ವಾಗತಿಸಿ 2026- 27ನೇ ಶೈಕ್ಷಣಿಕ ವರ್ಷದಲ್ಲಿ ಸಮುದಾಯದ ಸದ್ಬಳಕೆ ಮಾಡಿಕೊಂಡು 1.70 ಲಕ್ಷ ಸಂಗ್ರಹಿಸಿ ಸೌಲಭ್ಯಗಳನ್ನು ಒದಗಿಸಿಕೊಂಡ ಬಗ್ಗೆ ಪ್ರಾಸ್ತಾವಿಕ ಮಾತುಗಳಲ್ಲಿ ಮಾಹಿತಿಯನ್ನು ನೀಡಿದರು. ಶಿಕ್ಷಕರಾದ ಪ್ರವೀಣ್ ಎಸ್.ಎನ್. ರವರು ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕಿ ಶ್ರೀಮತಿ ರೇಖಾ ಶ್ರೀಮತಿ ಸತ್ಯವತಿ, ಶ್ರೀಮತಿ ಭವ್ಯ ಇವರ ಸಂಯೋಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಶತಮಾನೋತ್ಸವ ಸಭೆ:
ಶಾಲಾ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಅಪರಾಹ್ನ ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿಗಳಾದ ಶಂಭಯ್ಯ ಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ಪೋಷಕರು,ಎಸ್ ಡಿ ಎಂ ಸಿ ಸದಸ್ಯರು, ಶತಮಾನೋತ್ಸವ ಸಮಿತಿಯ ಸದಸ್ಯರು ಸೇರಿದಂತೆ ವಿದ್ಯಾಭಿಮಾನಿಗಳು ಭಾಗವಹಿಸಿದರು. ಡಿಸೆಂಬರ್ 11 2026ರಂದು ಅದ್ದೂರಿ ಕಾರ್ಯಕ್ರಮದೊಂದಿಗೆ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಶತಮಾನೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಯಿತು. ಶತಮಾನೋತ್ಸವ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧತೆಗೊಳಿಸಲು ವಿವಿಧ ಸಮಿತಿಗಳ ಸಭೆಯನ್ನು ಅ.3 ಶನಿವಾರ 2.00ಕ್ಕೆ ನಡೆಸಲು ನಿರ್ಧರಿಸಲಾಯಿತು.ಸಂಸ್ಥೆಯ ಮುಖ್ಯೋಪಾಧ್ಯಾಯರು ವಂದಿಸಿದರು.








