ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ಸೆಪ್ಟೆಂಬರ್‌ ತಿಂಗಳ ಕೂಪನ್‌ ಡ್ರಾ – ಅ‍ದೃಷ್ಟವಂತರ ಆಯ್ಕೆ

0

ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ಹಬ್ಬಗಳ ಸಲುವಾಗಿ ಭರ್ಜರಿ ಆಫರ್‌ ಗಳಿದ್ದು ಪ್ರತೀ ತಿಂಗಳು ಲಕ್ಕಿ ಕೂಪನ್‌ ಡ್ರಾ ನಡೆಯುತ್ತಿದ್ದು, ಸೆಪ್ಟೆಂಬರ್‌ ತಿಂಗಳ ಅದೃಷ್ಠವಂತರ ಆಯ್ಕೆ ಅ.3ರಂದು ನಡೆಯಿತು.

ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಜಯರಾಮ ಹಾಡಿಕಲ್ಲು, ಶ್ರೀಮತಿ ಜಯಲತಾ ಜಯರಾಮ ಹಾಡಿಕಲ್ಲು, ಸುದ್ದಿ ವರದಿಗಾರ ಕೆ.ಟಿ. ಭಾಗೇಶ್‌, ಸುದ್ದಿ ಡಿಸೈನರ್‌ ಅನಿಲ್‌ ಕಳಂಜ ಅದೃಷ್ಟವಂತರ ಆಯ್ಕೆ ನಡೆಸಿದರು. ಪ್ರಥಮ ಬಹುಮಾನ ಸ್ಮಾರ್ಟ್‌ ಟಿ.ವಿ. ಅನ್ನು ಲತಾ ಪಿ.ಕೆ. (ಕೂಪನ್‌ ನಂ. 1085), ದ್ವಿತೀಯ ಬಹುಮಾನ ಸೋಫ ಸೆಟ್‌ ಅನ್ನು ಜಿತೇಶ್‌ ಕುಮಾರ್‌ (ಕೂಪನ್‌ ನಂ. 1053), ತೃತೀಯ ಬಹುಂಾನ ಸ್ಮಾರ್ಟ್‌ ವಾಚ ಅನ್ನು ಸುಬ್ರಹ್ಮಣ್ಯ ವಿ (ಕೂಪನ್‌ ನಂ. 1213), ಚತುರ್ಥ ಬಹುಮಾನ ಇಯರ್‌ ಬಡ್ಸ್‌ ಅನ್ನು ಸೀತಾಮ್ಮ ಪಿ.ಡಿ. (ಕೂಪನ್‌ ನಂ. 1030) ರವರು ಪಡೆದುಕೊಂಡಿದ್ದಾರೆ. ಸಂಸ್ಥೆಯ ಮಾಲಕ ಶೈಲೇಂದ್ರ ಸರಳಾಯ, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್‌ ಕಾಳಮ್ಮನೆ, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.