ರಾಜ್ಯಶಾಸ್ತ್ರದಲ್ಲಿ ಸತತ ಐದನೇ ವರ್ಷ ನೂರಕ್ಕೆ ನೂರು ಅಂಕದ ಸಾಧನೆಗಾಗಿ ಎಸ್‌ಎಸ್‌ಪಿಯು ಕಾಲೇಜಿ ನ ವಿದ್ಯಾರ್ಥಿ, ಉಪನ್ಯಾಸಕಿಗೆ ಸನ್ಮಾನ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ರಾಜ್ಯಶಾಸ್ತ್ರ ವಿಷಯದಲ್ಲಿ ಸತತ ಐದನೇ ವರ್ಷ 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಬಿ.ಜಿ 100ರಲ್ಲಿ 100 ಅಂಕ ಪಡೆದಿದ್ದಾರೆ.ಈ ಸಾಧನೆಗಾಗಿ ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯಶಾಸ್ತ್ರ ವಿಷಯದಲ್ಲಿ 2022 ರಿಂದ 2026 ರ ತನಕ ನೂರಕ್ಕೆ ನೂರು ಅಂಕವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿರುವುದು, ಈ ಮೂಲಕ ಜಿಲ್ಲೆಯಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಏಕೈಕ ವಿದ್ಯಾಸಂಸ್ಥೆಯಾಗಿ ಎಸ್ಎಸ್‌ಪಿಯು ಕಾಲೇಜು ಮೂಡಿ ಬಂದಿದೆ. 2026ರಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಫಲಿತಾಂಶ ತಂದುಕೊಟ್ಟ ಸಂಸ್ಥೆಯ ಉಪನ್ಯಾಸಕಿ ಜಯ ಶ್ರೀ.ವಿ.ದಂಬೆಕೋಡಿ ಅವರನ್ನು ಕೂಡಾ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ರಾಜ್ಯಸಭಾ ಸದಸ್ಯ ಪ್ರವೀಣ್ ಚಕ್ರವರ್ತಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ಕಾಲೇಜು ವಿಭಾಗದ ಸಹಾಯಕ ನಿರ್ದೇಶಕ ಆನಂದ.ಟಿ, ನಿವೃತ್ತ ಪ್ರಾಧ್ಯಾಪಕ ರಾಜಾರಾಮ ತೋಳ್ವಾಡಿ, ದ.ಕ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಯಾನಂದ ಎನ್.ಸುವರ್ಣ, ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ ವಿಠಲ, ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರನಾಥ.ಎಂ,ದ.ಕ ಜಿಲ್ಲಾ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್‌ ಬೈಲಾಡಿ, ಎಸ್‌ಎಸ್‌ಪಿಯು ಕಾಲೇಜಿನ ಉಪನ್ಯಾಸಕಿ ಜಯಶ್ರೀ.ಕೆ.ಕೆ ಉಪಸ್ಥಿತರಿದ್ದರು. .