ಮಾರ್ಗರೇಟ್ ಮೇರಿ ಕುಕ್ಕಂದೂರು ನಿಧನ

0

ಜಾಲ್ಸೂರು ಗ್ರಾಮದ ಕುಕ್ಕುಂದೂರು ತಮಿಳು ಕಾಲನಿ ನಿವಾಸಿ ಶಿಕ್ಷಕ ಅರುಳಪ್ಪನ್‌ರವರ ಪುತ್ರಿ ಮಾರ್ಗರೇಟ್ ಮೇರಿ ಅ.೪ ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ೪೧ ವರ್ಷ ವಯಸ್ಸಾಗಿತ್ತು.

ಮೃತರು ತಂದೆ ಅರುಳಪ್ಪನ್, ತಾಯಿ ಸದಾಯಿ ಮೇರಿ, ಪತಿ ಎ.ಜೆ.ರಾಯ್, ಪುತ್ರಿಯರಾದ ನೇಹಾ ಮೇರಿ, ನಯೆನ್ಸಿ ಮೇರಿ, ಮಿಲ್ಟನ್ ರಾಯ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತ ದೇಹವನ್ನು ಇಂದು ರಾತ್ರಿ ಕುಕ್ಕಂದೂರಿನ ನಿವಾಸಕ್ಕೆ ಅಂತಿಮ ದರ್ಶನಕ್ಕೆ ತರಲಾಗುವುದೆಂದು ಮನೆಯವರು ತಿಳಿಸಿದ್ದಾರೆ.