













ಪ್ರಾರ್ಥನಾ ಸಂಗಮ
ಗಾಂಧಿನಗರ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ತರ್ಬಿಯತುಲ್ ಇಸ್ಲಾಂ ಜಮಾಅತ್ ಕಮಿಟಿ
ವತಿಯಿಂದ ಸುಲ್ತಾನುಲ್ ಅವುಲಿಯ ಶೇಖ್ ಅಬ್ದುಲ್ ಖಾದರ್ ಜೀಲಾನಿ ಯವರ ಸ್ಮರಣೆ ರಾತೀಬು ನೇರ್ಚೆ ಅ 3 ರಂದು ನಡೆಯಿತು.
ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ನೇತೃತ್ವ ವಹಿಸಿದ್ದರು
ಅಸ್ಸಯ್ಯದ್ ಕುಂಞಿ ಕೋಯ ತಂಞಳ್ ಸಅದಿ ದುವಾ ನೆರವೇರಿಸಿದರು.
ಪ್ರಾರ್ಥನಾ ಸಂಗಮದಲ್ಲಿ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ ಎಂಎಸ್ ಮಹಮ್ಮದ್, ಮಾಜಿ ಅಧ್ಯಕ್ಷ ಹಾಜಿ ಕೆ ಎಂ. ಮುಸ್ತಫ, ಪ್ರದಾನ ಕಾರ್ಯದರ್ಶಿ ಹಾಜಿ ಐ. ಇಸ್ಮಾಯಿಲ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಕಾರ್ಯದರ್ಶಿ ಕೆ. ಎಸ್. ಉಮ್ಮರ್, ನಿರ್ದೇಶಕರು ಗಳಾದ ಹಾಜಿ ಯಾಕೂಬ್ ಎಸ್ ಟಿ, ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಅಬೂಬಕ್ಕರ್ ಫ್ಯಾನ್ಸಿ ಸಿದ್ದೇಕ್ ಕೊಡಿಯಮ್ಮೆ, ಹಾಜಿ ಕೆ ಎಂ. ಮುಹಿಯ್ಯದ್ದೀನ್ ಫ್ಯಾನ್ಸಿ, ಮುದರ್ರಿಸ್ ಮುಬಶಿರ್ ಅಹ್ಸನಿ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.
ಕೊನೆಯಲ್ಲಿ ಸೀರಣಿ ಏರ್ಪಡಿಸಲಾಗಿತ್ತು.







