ಕೊಡಿಯಾಲ – ಮೂವಪ್ಪೆ – ಕಾಣಿಯೂರು ರಸ್ತೆ ಕಾಂಕ್ರೀಟಿಗೆ 25 ಲಕ್ಷ ರೂ. ಶಾಸಕರು ಇರಿಸಿದ್ದಾರೆ. ವಾರದೊಳಗೆ ಕೆಲಸ ಆರಂಭಗೊಳ್ಳುತ್ತದೆ : ಲೋಹಿತ್ ಕೊಡಿಯಾಲ

0

” ಕೊಡಿಯಾಲ ಗ್ರಾಮದ ಕೊಡಿಯಾಲ – ಮೂವಪ್ಪೆ – ಕಾಣಿಯೂರು ರಸ್ತೆ ಅಭಿವೃದ್ಧಿಗೆ ಶಾಸಕರು ಮುಖ್ಯಮಂತ್ರಿಗಳ ವಿಶೇಷ ಅನುದಾನವಾಗಿ ದೊರೆತ 25 ಕೋಟಿ ರೂ.ಗಳಲ್ಲಿ 25 ಲಕ್ಷ ರೂ.ಗಳನ್ನು ಇರಿಸಿದ್ದು, ಇನ್ನೊಂದು ವಾರದೊಳಗೆ ಕೆಲಸ ಆರಂಭಗೊಳ್ಳುತ್ತದೆ ” ಎಂದು ಕೊಡಿಯಾಲದ ಬಿ.ಜೆ.ಪಿ. ಮುಖಂಡ ಲೋಹಿತ್ ಕೊಡಿಯಾಲ ತಿಳಿಸಿದ್ದಾರೆ.
ಈ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಶಾಸಕಿ ಭಾಗೀರಥಿಯವರು ಬಂದು ಶಿಲಾನ್ಯಾಸ ಮಾಡಿದ್ದಾರೆ. ಜಲ್ಲಿ ಸಿಗದ ಕಾರಣದಿಂದಾಗಿ ಇದಕ್ಕಿಂತ ಮೊದಲು ಕೆಲಸ ಆರಂಭಗೊಂಡಿಲ್ಲ. ಈಗ ಜಲ್ಲಿ ಸಮಸ್ಯೆ ನಿವಾರಣೆಯಾಗಿದೆ. ಆದ್ದರಿಂದ ಈ ವಾರಾಂತ್ಯದಲ್ಲಿ ಕಾಮಗಾರಿ ಆರಂಭಗೊಳ್ಳುತ್ತದೆ. ” ಎಂದವರು ತಿಳಿಸಿದ್ದಾರೆ. ವಿರೋಧ ಪಕ್ಷದ ಕೆಲವರು ಮತದಾನ ಬಹಿಷ್ಕಾರದ ಮಾತನ್ನು ಹೇಳಿದರೆ ಇಲ್ಲಿ ಯಾರೂ ಹಾಗೆ ನಡೆದುಕೊಳ್ಳುವವರಿಲ್ಲ ” ಎಂದವರು ಹೇಳಿದರು.