














ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಈ ಬಾರಿ ಕೃಷಿಕರಿಗೆ ಬೆಳೆ ವಿಮೆ ಕಡಿಮೆ ಪಾವತಿಯಾಗುತ್ತಿರುವ ಬಗ್ಗೆ ಸಭೆಯು ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ಅಧ್ಯಕ್ಷತೆಯಲ್ಲಿ ಅ.05 ರಂದು ಸಂಘದದಲ್ಲಿ ನಡೆಯಿತು.

2025 – 26 ನೇ ಸಾಲಿನ ರೈತರ ವಿಮೆ ಪಾವತಿ ಕಡಿಮೆ ಪಾವತಿಯಾಗುತ್ತಿದ್ದು ಸಭೆಯಲ್ಲಿ ಸರ್ಕಾರದ ಹಳೆ ಮಾದರಿಯಲ್ಲೇ ಬೆಳೆ ವಿಮೆ ಪಾವತಿಸುವಂತೆ,ಮಳೆ ಮಾಪನ ವನ್ನು ಸಮರ್ಪಕವಾಗಿ ನಿರ್ವಹಿಸುವಂತೆ,ಮಳೆಯ ಪ್ರಮಾಣವನ್ನು ಮತ್ತು ಉಷ್ಣಾಂಶವನ್ನು ಪರಿಗಣಿಸವಂತೆ ನಿರ್ಣಯಿಸಲಾಯಿತು.ಕೇಂದ್ರಸರಕಾರಕ್ಕೆ , ರಾಜ್ಯ ಸರಕಾರಕ್ಕೆ,ಸಂಸದರು ಶಾಸಕರು,ಜಿಲ್ಲಾಧಿಕಾರಿ ದ.ಕ, ತೋಟಗಾರಿಕಾ ಉಪನಿರ್ದೇಶಕರು
ಸುಳ್ಯ ತಹಶೀಲ್ದಾರ್, ಮನವಿ ನೀಡಲು ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಹೇಶ ಜಬಳೆ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್,ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.







