112ಕ್ಕೆ ಕರೆ; ಸ್ಥಳಕ್ಕೆ ಧಾವಿಸಿ ಕುಡುಕರನ್ನು ಓಡಿಸಿದ ಪೊಲೀಸರು
ಗುತ್ತಿಗಾರು ಪೇಟೆಯ ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.














ಅ. 5 ರಂದು ಇಬ್ಬರು ಕುಡುಕರು ಬಸ್ ನಿಲ್ದಾಣದಲ್ಲೇ ಮಲಗಿ ಹೊರಳಾಡಿದ್ದು, ಮಲಗಿದಲ್ಲೇ ಮೂತ್ರ ಮಾಡಿ ಗಲೀಜು ಮಾಡಿದ್ದಾರೆ. ಇದರಿಂದ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ಮುಜುಗರ ಉಂಟಾಗಿದೆ.
ವಿಷಯ ತಿಳಿದು ಸಾರ್ವಜನಿಕರು ಗುತ್ತಿಗಾರು ಗ್ರಾಮ ಪಂಚಾಯತ್ಗೆ ದೂರು ನೀಡಿದ್ದಾರೆ. ಪಂಚಾಯತ್ ಸಿಬ್ಬಂದಿ ಸ್ಥಳಕ್ಕೆ ಬಂದರೂ ಕುಡುಕರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಕೊನೆಗೆ ಸಾರ್ವಜನಿಕರು ಪೊಲೀಸ್ ತುರ್ತು ಸೇವೆ 112 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಕರೆಗೆ ಸ್ಪಂದಿಸಿದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಹಸಪಟ್ಟು ಇಬ್ಬರು ಕುಡುಕರನ್ನು ಬಸ್ ನಿಲ್ದಾಣದಿಂದ ಓಡಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಪೊಲೀಸರು ಮತ್ತು ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







