ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ವಿಭಾಗಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಡಿ ರೂ. 56 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೂರು ತರಗತಿ ಕೊಠಡಿಗಳು ಹಾಗೂ ಒಂದು ಶೌಚಾಲಯ ಸಂಕೀರ್ಣದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಗುದ್ದಲಿಪೂಜೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರೂ ಹಾಗೂ ಕೆಪಿಎಸ್ ಬೆಳ್ಳಾರೆಯ ಎಸ್ಡಿಎಂಸಿಯ ಅಧ್ಯಕ್ಷರಾದ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು.















ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಬೆಳ್ಳಾರೆ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಶಾಲೆಯು ಅಭಿವೃದ್ಧಿಯ ಪಥದಲ್ಲಿ ಉತ್ತಮವಾಗಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಶಾಲೆಯ ಮತ್ತಷ್ಟು ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲ ಹಾಗೂ ಸಹಕಾರವನ್ನು ಒದಗಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಕಾರ್ಯಾಧ್ಯಕ್ಷರಾದ ಹರ್ಷ ಭಟ್ ಜೋಗಿಬೆಟ್ಟು, ದೇವತಾ ಪ್ರಾರ್ಥನೆಯನ್ನು ನೆರವೇರಿಸಿದರು. ಕೆಪಿಎಸ್ ಬೆಳ್ಳಾರೆಯ ಪ್ರಾಂಶುಪಾಲರಾದ ಜನಾರ್ದನ ಕೆ ಎನ್, ನಿಕಟಪೂರ್ವ ಎಸ್ಡಿಎಂಸಿ ಕಾರ್ಯಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ, ಕಳಂಜ-ಬಾಳಿಲ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅಜಿತ್ ರಾವ್, ಬೆಳ್ಳಾರೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಭಾಸ್ಕರ ನೆಟ್ಟಾರು, ಹಿರಿಯ ವಿದ್ಯಾರ್ಥಿ ದಿಲೀಪ್ ಗಟ್ಟಿಗಾರು ಉಪಸ್ಥಿತರಿದ್ದರು.
ಎಸ್ಡಿಎಂಸಿ ಸದಸ್ಯರಾದ ವಸಂತ ಪಡ್ಪು, ನವೀನ್ ಸಾರಕೆರೆ, ಮುರಳಿ ತಡಗಜೆ, ನಸೀಮಾ ಪಂಜಿಗಾರು, ಶಾಹೀನಾ ಮಣಿಮಜಲು, ಶಿವಾಜಿ ಮಣಿಮಜಲು, ಸೌಮ್ಯ ಐವರ್ನಾಡು ಹಾಗೂ ಜಮಾಲ್ ಮಣಿಮಜಲು, ಪೋಷಕರಾದ ಕೃಷ್ಣ ಪ್ರಸಾದ್ ಕುತ್ತ್ಯಾಡಿ, ಶಿಕ್ಷಕರಾದ ಶಾಂತಾ ಕುಮಾರಿ, ಸವಿತಾ ಗುಜರನ್, ಅರುಣಾ ಕೆ ಎಲ್, ಶೃತಿ ಬಿ, ಮತ್ತು ಮೋಹಿನಿ ಎ ಕೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ದಿನೇಶ್ ಮಾಚಾರ್ ಸ್ವಾಗತಿಸಿ, ವಂದಿಸಿದರು. ಕೆಪಿಎಸ್ ಬೆಳ್ಳಾರೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸುಮಾರು ರೂ. 1.5 ಕೋಟಿ ವೆಚ್ಚದಲ್ಲಿ ಪೋಸೆಟ್ ಕಟ್ಟಡ ನಿರ್ಮಾಣಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸುಸಜ್ಜಿತ ಕಟ್ಟಡ ಸೌಲಭ್ಯ ದೊರೆತಿದೆ. ಇದೀಗ ನಿರ್ಮಾಣಗೊಳ್ಳಲಿರುವ ಮೂರು ತರಗತಿ ಕೊಠಡಿಗಳು ಹಾಗೂ ಶೌಚಾಲಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡ ಬಳಿಕ ಶಾಲೆಯಲ್ಲಿನ ತರಗತಿ ಕೊಠಡಿಗಳ ಕೊರತೆಗೆ ಮತ್ತಷ್ಟು ಪರಿಹಾರ ದೊರೆಯಲಿದೆ.







