














ಬಾಳುಗೋಡು ಗ್ರಾಮದ ಕುಡುಮುಂಡೂರಿನಲ್ಲಿ ಆನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿದ ಘಟನೆ ವರದಿಯಾಗಿದೆ.

ಕುಡುಮುಂಡೂರಿನಲ್ಲಿ ಯತೀಶ್ ಕೂಜುಗೂಡು ಕಟ್ಟೆಮನೆಯವರ ತೋಟಕ್ಕೆ ನುಗ್ಗಿದ ಆನೆ ಅವರ ಗೇಟ್ ಗೂ ಹಾನಿ ಮಾಡಿದೆ. ಅಲ್ಲಿಂದ ದುರ್ಗಾ ಎಂಬುವರ ತೋಟದ ಮೂಲಕ ಸಾಗಿದ ಆನೆ ದೇವಿಪ್ರಸಾದ್ ಕಜೆಗದ್ದೆ, ಜಗದೀಶ್ ಕಟ್ಟೆಮನೆ ಕೂಜುಗೋಡುರವರ ತೋಟಕ್ಕೆ ನುಗ್ಗಿ ಹಾನಿ ಮಾಡಿದೆ. ಅಡಿಕೆ, ಬಾಳೆ ಕೃಷಿ ಸೇರಿದಂತೆ ಅಪಾರ ನಷ್ಟವನ್ನುಂಟು ಮಾಡಿದೆ.








