ಅ.16 : ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಚಂಡಿಕಾ ಹೋಮ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮವು ಅ.16 ರಂದು ನಡೆಯಲಿರುವುದು.
ಬೆಳಿಗ್ಗೆ ಗಂಟೆ 8.00 ರಿಂದ ದೇವತಾ ಪ್ರಾರ್ಥನೆ,ಸ್ವಸ್ತಿ ಪುಣ್ಯಾಹ ವಾಚನ,ಚಂಡಿಕಾ ಹೋಮ ಪ್ರಾರಂಭ,ಮಧ್ಯಾಹ್ನ ಗಂಟೆ 11.30 ರಿಂದ ಚಂಡಿಕಾಹೋಮದ ಪೂರ್ಣಾಹುತಿ,ಸುಮಂಗಲೀ ಆರಾಧನೆ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿರುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ತಿಳಿಸಿದ್ದಾರೆ.