ಅ.17,18 : ಐವರ್ನಾಡಿನಲ್ಲಿ ಯುವಶಕ್ತಿ ಸಂಘದ ವತಿಯಿಂದ ಶಾರದಾ ಪೂಜಾ ಮಹೋತ್ಸವ

0

ಯುವಶಕ್ತಿ ಸಂಘ ಐವರ್ನಾಡು,ಸಾರ್ವಜನಿಕರ ಸಹಕಾರದೊಂದಿಗೆ ಅ.17 ಮತ್ತು ಅ.18 ರಂದು ಶ್ರೀ ಶಾರದಾ ಪೂಜಾ ಮಹೋತ್ಸವವು ಪುತ್ತಿಲ ಶ್ರೀ ಗಿರೀಶ್ ಅಸ್ರಣ್ಣರವರ ನೇತೃತ್ವದಲ್ಲಿ ಐವರ್ನಾಡು ಸ.ಹಿ.ಪ್ರಾ.ಶಾಲಾ ಶ್ರೀ ಮಾತಾಜಿ ಸಭಾಭವನದ “ಮಡ್ತಿಲ ಪುರುಷೋತ್ತಮ ಗೌಡ ಸ್ಮಾರಕ” ರಂಗಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಣಹೋಮ ಮತ್ತು ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.
ನಂತರ ಗಂಟೆ 10.30 ರಿಂದ ಐವರ್ನಾಡು ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ಗಂಟೆ 6.30 ರಿಂದ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಡ್ಯಾನ್ಸ್ ರಾತ್ರಿ ಗಂಟೆ 7.30 ರಿಂದ ಸಾಂಸ್ಕೃತಿಕ ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ ಉಪಸ್ಥಿತರಿರುವರು.
ಸಾಧಕರಿಗೆ ಸನ್ಮಾನ
ಹಿರಿಯಣ್ಣ ಗೌಡ ಕುಳ್ಳಂಪಾಡಿ,ಮುರಳಿಕೃಷ್ಣ ಪಾಲೆಪ್ಪಾಡಿ,ಪ್ರವೀಣ ಕುಮಾರ ಪವಿತ್ರಮಜಲು ರವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮ ನಡೆದ ಬಳಿಕ ಶ್ರೀ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಅಮೋಘ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ.
ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 8.30 ರಿಂದ ಬೈರವಿ ನಾಟ್ಯಾಲಯ ಐವರ್ನಾಡು ಇವರಿಂದ “ನೃತ್ಯಾರ್ಪಣಂ” ಹಾಗೂ ಫ್ಯೂಷನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ತಂಡದಿಂದ “ಡ್ಯಾನ್ಸ್ ಡ್ಯಾನ್ಸ್” ಯುವಶಕ್ತಿ ಸದಸ್ಯರಿಂದ ಹಾಗೂ ಅತಿಥಿ ಕಲಾವಿದರಿಂದ ಯಕ್ಷ ತೆಲಿಕೆ “ಕಲ್ಜಿಗದ ಪುಣ್ಯಕೋಟಿ” ಎಂಬ ಕಥಾಭಾಗ ನಡೆಯಲಿದೆ.
ಅ.18 ರಂದು ಬೆಳಿಗ್ಗೆ ಗಂಟೆ 10.00 ರಿಂದ ಶ್ರೀ ಗುರುದೇವಾ ಭಜನಾ ಮಂಡಳಿ ಐವರ್ನಾಡು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಕ್ಕಳಿಗೆ “ಅಕ್ಷರಾಭ್ಯಾಸ” “ಆಯುಧ ಪೂಜೆ ” ನಡೆಯಲಿದೆ.
ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ ಗಂಟೆ 2.30 ರಿಂದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ಚೆಂಡೆ,ವಾದನದೊಂದಿಗೆ ವಿಜೃಂಭಣೆಯಿಂದ ಐವರ್ನಾಡು ಮುಖ್ಯರಸ್ತೆಯಲ್ಲಿ ಸಾಗಿ ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನಾ ನಡೆಯಲಿದೆ.