ಸುಳ್ಯ 58 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಲೆಕ್ಕ ಪತ್ರ ಮಂಡನಾ ಸಭೆ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾಸಮಿತಿ,ಸಾರ್ವಜನಿಕದೇವತಾರಾಧನಾಸಮಿತಿಯವತಿಯಿಂದಚೆನ್ನಕೇಶವ ದೇವಸ್ಥಾನದಲ್ಲಿ 5 ದಿನಗಳ ಕಾಲ ಆಚರಿಸಲ್ಪಟ್ಟ 58 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಲೆಕ್ಕ ಪತ್ರ ಮಂಡನಾ ಸಭೆಯು ಟ್ರಸ್ಟ್ಅಧ್ಯಕ್ಷಗೋಪಾಲಕೃಷ್ಣ ಕೆ.ಎಸ್ ರವರ ಅಧ್ಯಕ್ಷತೆಯಲ್ಲಿ
ಅ.7 ರಂದು ಕಲ್ಕುಡ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಶ್ರೀ ಸಿದ್ಧಿವಿನಾಯಕ
ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ಕೆ.ಉಮೇಶ, ಸಾರ್ವಜನಿಕ ದೇವತಾರಾಧನಾ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಕಾರ್ಯದರ್ಶಿ ದಿನೇಶ್ ಕುಮಾರ್ ಕೆ.ಸಿ, ಪ್ರದಾನ ಕಾರ್ಯದರ್ಶಿ ಭರತ್ ಪಿ.ಯು,ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣೇಶೋತ್ಸವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ದರಲ್ಲದೆ ಮುಂದಿನ ವರ್ಷದಲ್ಲಿ ಉತ್ಸವದ ಸಮಯದಲ್ಲಿ ಮಾಡಿಕೊಳ್ಳಬೇಕಾದ ಕೆಲವೊಂದುಬದಲಾವಣೆಗಳು ಮತ್ತು ಆಚರಣೆಯ ವಿಚಾರಗಳ ಬಗ್ಗೆ ಹಿರಿಯರಾದ ಪಿ.ಕೆ ಉಮೇಶ ರವರು ಸಲಹೆ ನೀಡಿದರು.
ಕೋಶಾಧಿಕಾರಿ ಬೆಳ್ಯಪ್ಪ ಗೌಡ ರವರು ಲೆಕ್ಕ ಪತ್ರದ ಅಯ ವ್ಯಯದ ಕುರಿತು ವಿವರ ನೀಡಿದರು. ಉತ್ಸವದ ಆಗು ಹೋಗುಗಳ ಬಗ್ಗೆ ಚರ್ಚಿಸಲಾಯಿತು.

ಜಂಟಿ ಸಮಿತಿಯ ಪದಾಧಿಕಾರಿಗಳಾದ ಗುರುದತ್ ಶೇಟ್, ಸೋಮನಾಥ ಪೂಜಾರಿ, ಜಯರಾಮ ಭಾರದ್ವಾಜ್, ಚಂದ್ರಶೇಖರಅಡ್ಪಂಗಾಯ,ನಾರಾಯಣ ಶಾಂತಿನಗರ, ವಿಶ್ವನಾಥ ಕುಂಚಡ್ಕ, ಸುಧಾಕರ ಕೇರ್ಪಳ, ಗಿರೀಶ್ ಕಲ್ಲುಗದ್ದೆ, ಸೋಮನಾಥ ಕೇರ್ಪಳ, ನವೀನ್ ಕಾಯರ್ತೋಡಿ, ರಂಜಿತ್ ಜಯನಗರ, ಹರ್ಷಿತ್ ನೀರಬಿದಿರೆ, ಶಿವಪ್ರಸಾದ್ ಆಲೆಟ್ಟಿ,
ಶ್ರೀಮತಿ ಕಿಶೋರಿ ಶೇಟ್, ಶ್ರೀಮತಿ ಚಂದ್ರಾಕ್ಷಿ ರೈ, ಶ್ರೀಮತಿ ಪ್ರಭಾ ಮತ್ತಿತರರು ಭಾಗವಹಿಸಿದರು.