ಮಂಡೆಕೋಲು : ಮನೆ ಮೇಲೆ ಬಿದ್ದ ಅಡಿಕೆ ಮರ : ಹಾನಿ October 7, 2026 0 FacebookTwitterWhatsApp ಮಂಡೆಕೋಲು ಗ್ರಾಮದ ಮಂಡೆಕೋಲು ಬೈಲಿನಲ್ಲಿ ಅ.7ರಂದು ಸಂಜೆ ಮನೆ ಮೇಲೆ ಅಡಿಕೆಮರ ಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ. ಸಂಜೆ ಸುರಿದ ಗಾಳಿಮಳೆಯ ಪರಿಣಾಮ ಮನೆಯ ಪಕ್ಕದಲ್ಲಿದ್ದ ಅಡಿಕೆ ಮರವೊಂದು ತುಂಡಾಗಿ ಮನೆಯ ಮೇಲೆ ಬಿದ್ದಿದೆ. ಪರಿಣಾಮ ಮನೆಯ ಮಾಡಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.