














ಇಂದು (ಅ. 9) ಸಂಜೆ ಕಳಂಜ ಗ್ರಾಮದ ಕೆದಿಲ ಭಾಗದಲ್ಲಿ ಬೀಸಿದ ಗಾಳಿಗೆ ಅಶೋಕ ಕೆದಿಲ ಮನೆಯ ಮೇಲ್ಛಾವಣಿಯ ಶೀಟ್ ಪುಡಿಯಾಗಿ, ಕಬ್ಬಿಣದ ಎ್ಯಂಗ್ಲರ್ ಗಳಿಗೆ ಹಾನಿಯಾಗಿರುವುದಲ್ಲದೆ ಜೀಪು ನಿಲ್ಲಿಸಿದ ಜಾಗದಲ್ಲಿ ಮೇಲ್ಛಾವಣಿಯ ಮೇಲೆಯೂ ಮರದ ಗೆಲ್ಲು ಬಡಿದು ಶೀಟ್ ತುಂಡಾಗಿ ಜೀಪಿನ ಮೇಲೂ ಮರದ ಕೊಂಬೆಗಳು ಬಿದ್ದು ಜೀಪಿಗೂ ಹಾನಿಯಾಗಿದೆ.

*ಶೇಡಿಕಜೆಯಲ್ಲೂ ಮರ ಬಿದ್ದು ರಸ್ತೆ ಬಂದ್*
ಕಳಂಜ ಗ್ರಾಮದ ಶೇಡಿಕಜೆ ಎಂಬಲ್ಲಿ ರಸ್ತೆ ಬದಿಯ ಮರ ಮುರಿದು ರಸ್ತೆಗೆ ಬಿದ್ದು ಸ್ವಲ್ಪ ಹೊತ್ತು ರಸ್ತೆ ತಡೆಯುಂಟಾಯಿತು. ಬಳಿಕ ಸ್ಥಳಿಯರು ಸೇರಿ ಮರ ತೆರವುಗೊಳಿಸಿದರು.









