ಸುಳ್ಯ :ಮೈತಡ್ಕ ಸೇತುವೆ ನಿರ್ಮಾಣಕ್ಕೆ ಹೆಚ್ಚುವರಿ 6.20 ಕೋಟಿ ಅನುದಾನ ಬಿಡುಗಡೆಗಾಗಿ ಲೋಕೋಪಯೋಗಿ ಸಚಿವರಿಗೆ ಮನವಿ

0

ಸುಳ್ಯ ತಾಲೂಕಿನ ಮಂಡೆಕ್ಕೊಲು ಗ್ರಾಮದ ಮೈತಡ್ಕದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಪಯಸ್ವಿನಿ ನದಿಗೆ ಸೇತುವೆ ನಿರ್ಮಾಣಕ್ಕೆ ಈಗಾಗಲೇ ರೂ 10 ಕೋಟಿ ಮಂಜೂರಾಗಿ ಕಾಮಗಾರಿಯ ತಾಂತ್ರಿಕ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಸದರಿ ಅಂದಾಜು ಪಟ್ಟಿಯ ಬಳಿಕ ಹೆಚ್ಚುವರಿಯಾಗಿ ಸೇತುವೆ ಮತ್ತು ಸಂಪರ್ಕ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ರೂ16 ಕೋಟಿ 20 ಲಕ್ಷ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ.

ಇದೀಗ ಹೆಚ್ಚುವರಿ ರೂ 6 ಕೋಟಿ 20 ಲಕ್ಷ ಅನುದಾನಮನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ ಖಾದರ್ ರವರು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಯವರಿಗೆ ಶಿಫಾರಸು ಪತ್ರವನ್ನು ನೀಡಿದ್ದು ಸೇತುವೆ ನಿರ್ಮಾಣಕ್ಕೆ ಪ್ರಯತ್ನಿಸಿದ ಸುಳ್ಯ ನಗರ ಪಂಚಾಯತ್ ಮಾಜಿ ಅದ್ಯಕ್ಷರಾದ ಎಸ್.ಸಂಶುದ್ದೀನ್ ರವರು ಸಚಿವರಿಗೆ ಆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ಲೋಕಪಯೋಗಿ ಸಚಿವರು ಇದಕ್ಕೆ ಪ್ರತಿಕ್ರಿಯಿಸಿ ಅನುದಾನ ಬಿಡುಗಡೆಗೆ ಭರವಸೆ ನೀಡಿದ್ದು ಸೇತುವೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅವರು ಬರುವುದಾಗಿ ಒಪ್ಪಿಗೆಯನ್ನು ನೀಡಿರುತ್ತಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸುಳ್ಯದ ಮುಖಂಡರುಗಳಾದ ಕೆ.ಗೋಕುಲ್ ದಾಸ್, ರಕ್ಷಿತ್ ದೊಡ್ಡಡ್ಕ ಹಾಗೂ ಗಾಂಧಿ ಅಡ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು.