ಯಾವ ಮಾನದಂಡದಲ್ಲಿ ಇಷ್ಟು ಕಡಿಮೆ ಹಣ ಬಂದಿದೆ : ಕೃಷಿಕರ ಪ್ರಶ್ನೆ














ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೃಷಿಕರಿಗೆ ಬೆಳೆ ವಿಮೆ ಕಡಿಮೆ ಪಾವತಿಯಾದ ಬಗ್ಗೆ ಕೃಷಿಕರ ಸಭೆಯು ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ಅ.08 ರಂದು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ರೈತ ಸದಸ್ಯರು ಬೆಳೆ ವಿಮೆ ಕಂಪೆನಿಗೆ ಹಣ ಪಾವತಿಸುವಾಗ ರಾಜ್ಯ, ಕೇಂದ್ರ ಸರಕಾರದ ಪಾಲು ಇರುತ್ತದೆ. ಆದ್ದರಿಂದ
ಇಷ್ಟು ಕಡಿಮೆ ಮೊತ್ತ ಬಿಡುಗಡೆಯಾಗಲು ಕಾರಣವೇನು. ಈ ಹಿಂದೆ ಮಳೆ ಮಾಪನ ಸರಿ ಇಲ್ಲದ ಸಮಯದಲ್ಲೂ ಹೆಚ್ಚು ಮೊತ್ತ ಬಂದಿರುತ್ತದೆ. ಈ ಬಾರಿ ಯಾವ ಮಾನದಂಡದಲ್ಲಿ ಇಷ್ಟು ಕಡಿಮೆ
ಮೊತ್ತ ಬಂದಿರುತ್ತದೆ.ಮೊದಲಾದ ಚರ್ಚೆಗಳು ನಡೆಯಿತು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇ- ಮೇಲ್ ಕಳುಹಿಸುವುದು ಮತ್ತು ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.
ಅಲ್ಲಿ ಇದಕ್ಕೆ ಪರಿಹಾರ ಸಿಗದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ತೀರ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ, ನಿರ್ದೇಶಕ ಸುಬ್ರಹ್ಮಣ್ಯ ಕುಳ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದೀಪಕ್ ದೊಡ್ಡಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿ ಲೋಹಿತ್ ಎಣ್ಣೆಮಜಲು ಸ್ವಾಗತಿಸಿದರು. ನಿರ್ದೇಶಕ
ವಾಚಣ್ಣ ಕೆರೆಮೂಲೆ ವಂದಿಸಿದರು.







