ಕಲ್ಲುಮುಟ್ಲು :ಶೈನ್ ಕಾರ್ ಕೇರ್ ಸೆಂಟರ್ ಶುಭಾರಂಭ

0

ಶೈನ್ ಹೆಸರು ಬ್ರಾಂಡ್ ಆಗಿ ಪರಿವರ್ತನೆ ಹೊಂದಲಿ- ಗುರುಪ್ರಸಾದ್ ರೈ ಮೊರಂಗಲ್ಲು

ಸುಳ್ಯ ಕಸಬಾದ ಕಲ್ಲುಮುಟ್ಲು ವಿನಲ್ಲಿ ನೂತನ್ ಪೂಜಾರಿ ಮತ್ತು ಮದನ್ ಪೂಜಾರಿ ಯವರ ಮಾಲಕತ್ವದ ಶೈನ್ ಕಾರ್ ಕೇರ್ ಸೆಂಟರ್ ಅ.11 ರಂದುಶುಭಾರಂಭಗೊಂಡಿತು.

ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ಅಧ್ಯಕ್ಷರಾದ ಗುರುಪ್ರಸಾದ್ ರೈ ಮೊರಂಗಲ್ಲು ರವರು
ದೀಪ ಪ್ರಜ್ವಲಿಸಿ ಮಾತನಾಡಿ”ಉದ್ಯಮದಲ್ಲಿ ಸರ್ವಿಸ್ ಮತ್ತು ಗ್ರಾಹಕರೊಂದಿಗೆ ಉತ್ತಮ ಒಡನಾಟವಿರಿಸಿಕೊಳ್ಳಬೇಕು. ಶೈನ್ ಹೆಸರು
ಮುಂದೆ ಬ್ರಾಂಡ್ ಆಗಿ ಹೊರಹೊಮ್ಮುವಂತಾಗಲಿ ಎಂದು ಶುಭ ಹಾರೈಸಿದರು.

ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ.ವೆಂಕಪ್ಪ ಗೌಡ ರವರು ಮಾತನಾಡಿ ” ನಮ್ಮ ವಸ್ತ್ರ ಗಳನ್ನು ಸ್ವಚ್ಛ ವಾಗಿಟ್ಟುಕೊಳ್ಳುವ ರೀತಿಯಲ್ಲಿ ನಾವು ಉಪಯೋಗಿಸುವ ವಾಹನಗಳನ್ನು ಶುಚಿಯಾಗಿರಿಸಿಕೊಂಡರೆ ಅದರಿಂದ ವಿಪತ್ತು ಬರುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ನಿಕಟ ಪೂರ್ವಾಧ್ಯಕ್ಷ ಪಿ.ಬಿ.ಸುಧಾಕರ ರೈ ,ಜಿ.ಪ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಗೌಡ ನಾಗಪಟ್ಟಣ, ಗುತ್ತಿಗೆದಾರರಾದ ತೀರ್ಥಕುಮಾರ್ ಕುಂಚಡ್ಕ, ಎಸ್.ಸಿಕ್ಸ್ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಅಜ್ಜಾವರ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ,
ಸ್ಥಳದ ಮಾಲಕರು, ಉಪನ್ಯಾಸಕರಾದ ಸುರೇಶ್ ಬೂಡುಪನ್ನೆ, ಕಟ್ಟಿಕ್ಕಾರ್ ಫ್ಯಾನ್ಸಿ ಮಾಲಕ ಅಬ್ದುಲ್ ಖಾದರ್, ಸ್ಥಳೀಯರಾದ ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಮುತ್ತಪ್ಪ ಪೂಜಾರಿ ಮತ್ತು ಶ್ರೀಮತಿ ಸವಿತಾ ಮುತ್ತಪ್ಪ ಪೂಜಾರಿಯವರು ಸರ್ವರನ್ನು ಸ್ವಾಗತಿಸಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಂಧು ಮಿತ್ರರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

ನೂತನ ಶೈನ್ ಕಾರ್ ಕೇರ್ ಸೆಂಟರ್ ನಲ್ಲಿ ಪರಿಶುದ್ಧ ಬಾವಿ ನೀರಿನಿಂದ
ಎಲ್ಲಾ ತರಹದ
ವಾಹನಗಳನ್ನು ವಾಶ್ ಮಾಡಿಕೊಡಲಾಗುವುದು. ಫಾಮ್ ವಾಶ್ , ಡಿಟೈಲಿಂಗ್, ಸೆರಾಮಿಕ್ ಮತ್ತು ಪಿ.ಪಿ.ಎಫ್ ವ್ಯವಸ್ಥೆ ಇರುವುದು ಎಂದು ಮಾಲಕರು ತಿಳಿಸಿದರು.