ರೋಟರಿ ಕ್ಲಬ್ ಸುಳ್ಯ ಸಿಟಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಜಾಥಾ

0

ಸುಳ್ಯ ರೋಟರಿ ಕ್ಲಬ್ ಸಿಟಿ ವತಿಯಿಂದ ಅ.3 ಮತ್ತು4 ರಂದು ರಸ್ತೆಸುರಕ್ಷತೆ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.


ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡು ಜಾಗೃತಿ ಜಾಥವು ಕಲ್ಲುಗುಂಡಿ ಪೊಲೀಸ್ ಠಾಣೆಯ ಬಳಿ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿ ಜಾಗೃತಿ ಕರಪತ್ರ ವಿತರಣೆ ಮಾಡಲಾಯಿತು.


ಸುಳ್ಯದಿಂದ ಮಡಿಕೇರಿ ಯವರೆಗೆ ರಸ್ತೆಯುದ್ದಕ್ಕೂ ಜಾಗೃತಿ ಕರಪತ್ರಗಳನ್ನು ವಿತರಣೆ ಮಾಡಿದರು.
ಜಾಗೃತಿ ಸಮಾರಂಭದ ಸಮಾರೋಪ ಮಡಿಕೇರಿ ಅರ್ತ್ ಹೆವನ್ ಕೂರ್ಗ್ ರೆಸಾರ್ಟ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ರೊ.ಡಾ.ರವಿಅಪ್ಪಾಜಿ ಉಪಸ್ಥಿತರಿದ್ದರು.
ರೋಟರಿ ಸುಳ್ಯ ಸಿಟಿ ಅಧ್ಯಕ್ಷ ರಾಕೇಶ್ ರಾಘವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು
ರೋಟರಿ ಕ್ಲಬ್ ಸುಳ್ಯ ಅಧ್ಯಕ್ಷೆ ಲತಾಮಧುಸೂದನ್,ನಿಕಟ ಪೂರ್ವ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ ಕೆ,ನಿಕಟ ಪೂರ್ವ ಅಧ್ಯಕ್ಷ ಹೇಮಂತ್ ಕಾಮತ್,ಮಾಜಿ ಅಧ್ಯಕ್ಷ ಪ್ರೀತಂ,ಗಿರೀಶ್ ನಾರ್ಕೊಡ್ ಕಾರ್ಯದರ್ಶಿ ಪುರಂದರ ರೈ ಹಾಗೂ ರೋಟರಿ ಸದಸ್ಯರು ಕಾರ್ಯಕ್ರಮದಲ್ಲಿ ಬಾಗವಹಿಸಿದರು
ಸುಳ್ಯ ಮೂವತ್ತು ಜನರು ಬೈಕ್ ಮೂಲಕ ಜಾಗೃತಿ ಜಾಥದಲ್ಲಿ ಸುಳ್ಯದಿಂದ ತೆರಳಿದರು..