ನಾವು ಮಾಡಿದ ಕೆಲಸಕ್ಕೆ ರಾಜಕೀಯ ಲಾಭ ಪಡೆಯಲು ಹೊರಟ್ಟಿದ್ದಾರೆ: ಕೆ ಎಫ್ ಡಿ ಸಿ ಕಾರ್ಮಿಕ ಸಂಘಟನೆ

0

ಕಾರ್ಮಿಕ ಸಂಘಟೆಗಳ ಹೋರಾಟಕ್ಕೆ ಜಯ ಅರಿಯರ್ಸ್ ಪಾವತಿಗೆ ಡಿಎಲ್ ಸಿ ನ್ಯಾಯಾಲಯದ ಆದೇಶ

ತಮಿಳು ಪುನರ್ ವಸತಿದಾರರಿಗೆ ಭಾರತ ಸರಕಾರ ಮತ್ತು ಶ್ರೀಲಂಕ ಸರಕಾರದ ಒಪ್ಪಂದಗಳಂತೆ ಇಲ್ಲಿ ನೆಲೆಸಿದ ರಬ್ಬರ್ ಮೂರ್ತೆ ಕಾರ್ಮಿಕರಿಗೆ ಇದೀಗ ಹೋರಾಟದ ಫಲವಾಗಿ ಅರಿಯರ್ಸ್ ಪಾವತಿ ಆರಂಭಗೊಂಡಿದೆ ಎಂದು ಹೋರಾಟ ನಡೆಸಿದ ಸಂಘಟನೆಗಳಾದ ಕೆ ಎಫ್ ಡಿ ಸಿ ಲೆಬರರ್ಸ್ ಯೂನಿಯನ್, ತೋಟಂ ಮಜ್ದೂರ್ ಸಂಘ,ಜನರಲ್ ಎಪ್ಲಾಂಯಿ ಯೂನಿಯನ್ ಪದಾಧಿಕಾರಿಗಳು ಅ.10 ರಂದು ಸುಳ್ಯ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಈ ಹಿಂದೆ ಸುಳ್ಯ ಕೆಎಫ್ ಡಿಸಿ ಕಛೇರಿ ಮುಂಭಾಗದಲ್ಲಿ ಧರಣಿಯನ್ನು ನಡೆಸಿದ್ದು ಆ ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಕೆಎಫ್ ಡಿಸಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಾತುಕತೆ ನಡೆದು ಬಳಿಕ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಹಿನ್ನಲೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಇದೀಗ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಅ.8ರಂದು ಅರಿಯರ್ಸ್ ಪಾವತಿ ಸೇರಿದಂತೆ ಪ್ರಮುಖ ಮೂರು ಬೇಡಿಕೆಗಳಿಗೆ ಸಮ್ಮತಿ ಸೂಚಿಸಿ ಪಾವತಿ ನಡೆಸದೇ ಇದ್ದಲ್ಲಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಮೂರು ಸಂಘಟನೆಯ ಅಧ್ಯಕ್ಷರುಗಳಾದ ಜೀವರತ್ನ ನಾಗಪಟ್ಟಣ, ಶರತ್ ಕುಮಾರ್ ಮತ್ತು ಸುಂದರಂ ತಿಳಿಸಿದರು.
ನಮ್ಮ ಸಂಘಟನೆಗಳ ನಿರಂತರ ಹೋರಾಟದಿಂದ ಕಾರ್ಮಿಕರ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಿದೆ ಇದರ ಹಿಂದೆ ನಮ್ಮ ಮೂರು ಸಂಘಟನೆಗಳ ಪರಿಶ್ರಮ ಸಿಕ್ಕಿದೆ ಹೊರತು ಬೇರೆ ಯಾರ ಸಹಾಯ ಇದರ ಹಿಂದೆ ಇಲ್ಲ ಕೆಲವರು ಇದನ್ನು ರಾಜಕೀಯ ಲಾಭವನ್ನು ಉದ್ದೇಶದಿಂದ ನಾವು ಮಾಡಿದ್ದೇವೆ ಎಂದು ಹೇಳಿ ಕೊಳ್ಳುತ್ತಿದ್ದಾರೆ ಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಂದರ ಲಿಂಗಂ ಐವರ್ನಾಡು , ರವೀಂದ್ರನ್ , ಪ್ರವೀಣ್ ಸೋಣಂಗೇರಿ , ಶಶಿಕುಮಾರ್ ನೆಟ್ಟಾರು, ಕೋಮವೆಂಕ್ರೂಸ್ , ವಿಜಯ ಪ್ರಭು ಉಪಸ್ಥಿತರಿದ್ದರು.