ಎಚ್ ಒನ್ 200 ಇಂಡಿಯಾ ಮಲ್ಟಿ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಇದರ 167ನೇ ಶಾಖೆ ಸುಳ್ಯದಲ್ಲಿ ಆರಂಭ
ಗಣ್ಯರು ಹಾಗೂ ಪ್ರೈವೇಟ್ ಲಿಮಿಟೆಡ್ ಇದರ ನೂರಾರು ಮಂದಿ ಸಾಧಕರುಗಳು ಭಾಗಿ
ಸುಳ್ಯದ ಹಳೆಗೇಟಿನ ಅಡ್ಕ ರಸ್ತೆಯಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಎಲ್ಲಾ ತರಹದ ಎಲೆಕ್ಟ್ರಾನಿಕ್ಸ್ ಐಟಮ್ಸ್ ಗಳ ಬೃಹತ್ ಮಳಿಗೆ ‘ಪಯಸ್ವಿನಿ ಬಜಾರ್’ ಅ 12 ರಂದು ಶುಭಾರಂಭಗೊಂಡಿತು.















ಈ ಸಂಸ್ಥೆಯು ಎಚ್ ಒನ್ 200 ಇಂಡಿಯಾ ಮಲ್ಟಿ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಇದರ 167ನೇ ಶಾಖೆಯಾಗಿ ಸುಳ್ಯದಲ್ಲಿ ಇಂದು ಆರಂಭಗೊಂಡಿತು
ನೂತನ ಸಂಸ್ಥೆಯ ಉದ್ಘಾಟನೆಯನ್ನು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರವರು ನೆರವೇರಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಸೂಡ ಅಧ್ಯಕ್ಷರಾದ ಕೆ ಎಂ ಮುಸ್ತಫಾ, ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಸಹಕಾರಿ ದುರೀಣ ಪಿ ಸಿ ಜಯರಾಮ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಹಮೀದ್ ಜನತಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ಘಟಕದ ಸಭಾಪತಿಗಳಾದ ಪಿ ಬಿ ಸುಧಾಕರ್ ರೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್,ಸುಳ್ಯ ರೋಟರಿ ಅಧ್ಯಕ್ಷರಾದ ಲತಾ ಮಧುಸೂದನ್, ಜೆ ಸಿ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಿ ಎಸ್ ಗಂಗಾಧರ್, ಗಣ್ಯರುಗಳಾದ ಹೇಮಂತ್ ಕಾಮತ್, ಕೆ ಎಸ್ ಉಮ್ಮರ್, ಇಬ್ರಾಹಿಂ ಹಾಜಿ ಕತ್ತರ್, ಜೈ ಶಂಕರ್, ಅಬ್ದುಲ್ ರಹಿಮಾನ್ ಹಾಜಿ,
ರೊ.ಪ್ರಭಾಕರನ್ ನಾಯರ್ ಶ್ರೀಮತಿ ನಾಗವೇಣಿ, ಕಟ್ಟಡ ಮಾಲಕರಾದ ಹೊನ್ನಪ್ಪ ಮಾಸ್ಟರ್ ಹಾಗೂ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭದ ಬಳಿಕ ಇಂಡಿಯಾ ಮಲ್ಟಿ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಇದರ ಡಿ ಎಂ ಆನಂದ್ ಲಮಾಣಿ ರವರು ಭಾಗವಹಿಸಿ ಸಂಸ್ಥೆಗಳು ನಡೆದು ಬಂದ ಹಾದಿಯ ಬಗ್ಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಕೊಡಗು ಹಾಗೂ ಮೈಸೂರು ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸಾಧಕರುಗಳು ಭಾಗವಹಿಸಿ ತಮ್ಮ ತಮ್ಮ ಪ್ರಶಸ್ತಿ ಪತ್ರವನ್ನು ಸಂಸ್ಥೆಯ ಮುಖಂಡರುಗಳಿಂದ ಪಡೆದುಕೊಂಡರು.
ಸಂಸ್ಥೆಯ ಪ್ರೋತ್ಸಾಹಕರದ ಮಹಮ್ಮದ್ ಇಕ್ಬಾಲ್ ಎಲಿಮಲೆ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರರಾದ ಫೈಝಲ್ ಜೀರ್ಮುಖಿ ಹಾಗೂ ರಹೀಮ್ ಅಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಪ್ರತಿಷ್ಠಿತ ಎಲ್ಲಾ ಕಂಪನಿಗಳ ಎಲೆಕ್ಟ್ರಾನಿಕ್ ಐಟಂಗಳು ಮತ್ತು ಗೃಹ ಉಪಯೋಗಿ ಸಾಮಾಗ್ರಿಗಳು ಲಭ್ಯವಿದ್ದು ಅದರ ಎಂ ಆರ್ ಪಿ ದರ ದಿಂದ ಶೇಕಡ 50 ರಷ್ಟು ರಿಯಾಯಿತಿ ದರದಲ್ಲಿ ಸದಾ ಗ್ರಾಹಕರಿಗೆ ನೀಡಲಿದ್ದೇವೆ ಎಂದು ಮಾಲಕರು ಸಂಸ್ಥೆಯ ಬಗ್ಗೆ ತಿಳಿಸಿದರು.







